ಬೇರೆ - ಬೇರೆ
ನನ್ನಲ್ಲಿ ರಕ್ತದ ನಾಲೆ ಇದೆ
ಉಸಿರಲ್ಲಿ ಜ್ವಾಲೆ ಇದೆ
ಎದೆಯಲ್ಲಿ ಪ್ರೇಮವಿದೆ
ನೀನ್ನಲ್ಲಿ ......?
ಆದರೂ ನಾವು ಬೇರೆ ಬೇರೆ
ನನಗೆ ಕಣ್ಣೆರಡು ಕಾಲೆರಡು
ಕಣ್ಣೊಳಗೆ ಕಡಲು
ಕಾಲಗಳಲ್ಲಿ ಬಲವು
ನಿನಗೂ ಅಷ್ಟೇ .....?
ಆದರೂ ನಾವು ಬೇರೆ ಬೇರೆ
ಮೇಲ್ ಬಾಯಿ ಕೇಳಗುದ್ದ
ತಿಂದು ಹೊರ ಹಾಕುವೆನು
ನೀನು ಅಷ್ಟೇ .......?
ಆದರೂ ನಾವು ಬೇರೆ ಬೇರೆ
ನೀನು ಹೆಣ್ಣಂತೆ ನಾನು ಗಂಡಂತೆ
ಅವರು ಇನ್ನನೆನೊ ಅಂತೆ
ಜಾತಿಯಂತೆ ಕುಲವಂತೆ
ನಾವಿಬ್ಬರೂ ದೂರವಂತೆ
- ಕೌರವ
07 Dec 2017, 07:26 am
Download App from Playstore: