ತಿರುಗಿ ಬರಬಾರದೆ...

ಮನಸೊಳಗೆ ನೆನಪುಗಳ ಮಳಿಗೆ ತೆರೆದಿದೆ ಗೆಳತಿ
ಹೃದಯವು ಕತ್ತಲಲಿ ಅಳುವ ತಬ್ಬಿ ಕುಳಿತಿದೆ ಗೆಳತಿ

ನಮ್ಮಿಬ್ಬರ ಸಂಗಮ ಜಾಗ ಹುಡುಕಿ ಬಂದ ನನಗೆ
ನಿನ್ನ ಜಾರುವ ಮುಂಗುರುಳ ನೋಡುವ ಕಾತುರವಾಗಿದೆ ಗೆಳತಿ

ನಮ್ಮ ಕಣ್ಣ ಭಾಷೆಗೆ ಅಂದು ಮೌನವೇ ಮಾತಿನ ಪ್ರತಿರೂಪ
ನಿನ್ನ ಕಣ್ಣ‌ ಸೆಳೆತವಿರದೆ ಇಂದು ಮಾತು ಮೌನವಾಗಿದೆ ಗೆಳತಿ

ನಿನ್ನ ಅಧರದ ಚೆಲುವು, ಮಡಿಲಿನ‌ ಒಲವು ಇಲ್ಲವಾದ ಮೇಲೆ
ಕನಸುಗಳೆಲ್ಲ ಮಸಣದಲಿ‌ ಮಣ್ಣ ಸೇರಿದಂತಾಗಿದೆ ಗೆಳತಿ

ನೀನೆ ನನ್ನ ಬದುಕಿಗೆ ಒಡತಿ, ನೀನಿರದೆ ನನಗೆ ಉಳಿವಾದರು ಎಲ್ಲಿ
ನೀನು ಈ ಉಸಿರ ಉಳಿಸಲಾದರು ಒಮ್ಮೆ ತಿರುಗಿ ಬರಲಾಗದೆ ಗೆಳತಿ

- ಶ್ರೀಕಾವ್ಯ

08 Dec 2017, 11:55 pm
Download App from Playstore: