ಓ ನೈಟಿ

ವಸ್ತ್ರ ಲೋಕ ಆಕ್ರಮಿತ ರಾಣಿ
ಓ ನೈಟಿ
ಸಾವಿರಾರು ರೂ ತೆತ್ತ
ಯಾವ ಸ್ಯಾರಿನು
ನಿನಗಿಲ್ಲ ಸರಿಸಾಟಿ
ನೀರೆಯರ ಸೀರೆಗಳ
ಮಾಡಿರುವೆ ಲೂಟಿ
ಚೂಡಿ ಮಿಡಿಗಳೊಡನೆ
ನಡೆಸುತ್ತಿರುವೆ ಪೈಪೋಟಿ
ನಗರವಾಸಿ ಲಲನೆಯರ
ನಲ್ಮೆಯ ಬ್ಯುಟಿ
ಹಳ್ಳಿ ಹೈದೆಯರ ಚಿತ್ತಗೆಡಿಸಿ
ಮೆರೆಯುತ್ತಿರುವ ಮಹಾ ಘಾಟಿ
ಅಂದು ಒಳಗಿರಲೂ ಅಳುಕುತ್ತಿದ್ದ ನೀನು
ಇಂದು ಬೀದಿ ಬಜಾರಗಳಲ್ಲೂ
ನಿನ್ನ ಸಂಭ್ರಮ ಆಹಾ ಅದೇನು
ನೀರು ಕಾಣಿಸದಿದ್ದರು
ಪಡಲಾರೆ ಕೋಪ
ನೆರಿಗೆ ಇಸ್ತ್ರಿ ಕಾಟ
ನಿನಗೆ ತಟ್ಟದ ಶಾಪ
ಅಂಗನೆಯರ ಅಂಗ ರಕ್ಷಕಿ
ಪುಂಡ ಪೋಕರ ಮನರಂಜಕಿ


"

- ಯು.ರಾಮು ಸಿರಿಗೆರೆ

09 Dec 2017, 08:25 pm
Download App from Playstore: