ನೋಡು ನೋಡು....

ಅತ್ತಿತ್ತ ನೋಡು
ಚುಕ್ಕಿ ಚಂದ್ರನ ನೋಡು
ಕಪ್ಪು ಮಿಂಚುಳ್ಳಿ ಅಣಕಿ ನೋಡು
ಚಂದಕಿ ಸಾಲು ಜಿಗಿದು ನೋಡು
ಮುತ್ತಿಟ್ಟ ಮುಗಿಲ ಮಿಂಚು ನೋಡು
ಕತ್ಲಲ್ಲಿ ಮೀನುಗೋ ತಾರೆ ನೋಡು
ಅದರೋಳಗೆ ಕಾಣೋ ಗತ್ತು ನೋಡು
ಇರುಳಲ್ಲಿ ಕಾಣೋ ಬೇಳಕ ನೋಡು
ಕಣ್ಣೋಳಗೆ ಕಾಣೋ ಕನಸ ನೋಡು
ಅಲ್ಲಿಲ್ಲಿ ಅಲೆಯೋ ನೆರಳ ನೋಡು
ಅವ್ವಲಕ್ಕಿ ಅನ್ನ ಊಟ ಮಾಡು......
ಕಣ್ಮಚ್ಚಿ ಒಲವ ನಿದ್ದೆ ಮಾಡು....

- ರಾಗಸಿರಿ....

09 Dec 2017, 08:51 pm
Download App from Playstore: