ಅಂದದ ಅರಮನೆ...
ಮುಗಿಲಾಚೆ ಹೋಗಿ
ಮಳೇಯ ಹಿಡಿದು ತರಲೆ
ಭುಮಿ ತಾಯಿಯ ಮಡಿಲ
ತಂಪು ಮಾಡೋಕೆ......
ಕಡಲ ಆಳಕ್ಕೆ ಹೋಗಿ
ಮುತ್ತ ಹುಡುಕಿ ತರಲೆ
ಮದನಾರಿಯರಯರ
ಮನವ ಒಲಿಸೋಕೆ.....
ಚಂದ್ರನಂಗಳಕ್ಕೆ ಹೋಗಿ
ತಾರೆಗಳ ಎಣಿಸಿ ತರಲೆ
ನಮ್ಮನೆ ಅಂಗಳ ಸಿಂಗರಿಸೋಕೆ....
ಸ್ಪರ್ಗ ಲೋಕಕ್ಕೆ ಹೋಗಿ
ನಗುವ ಹೋತ್ತು ತರಲೆ
ನಿಮ್ಮಲ್ಲರ ನೋವ ಮರೆಸೋಕೆ......
ನಾಗಲೋಕಕ್ಕೆ ಹೋಗಿ ನಾಗ
ಮಣಿಯ ಕದ್ದು ತರಲೆ
ಜೀವ ಉಳಿಸೋಕೆ.....
ದೇವ ಲೋಕಕ್ಕೆ ಹೋಗಿ
ದೇವರ ಬೇಡಿ ಕರೆತರಲೆ
ಯಲ್ಲರ ಹರಸೋಕೆ.......
ಯಲ್ಲರ ಕರೆತರಲೆ
ಅಂದದ ಅರಮನೆಯ
ಮಾಡಿ ನಲಿಯೋಕೆ ..........
- ರಾಗಸಿರಿ....
10 Dec 2017, 01:18 pm
Download App from Playstore: