ಅರ್ಥವಾಗದ ಬಂಧನ..!!
ತನ್ನೊಳಗಿನ ಭಾವದ ಪರಿಯ ಹಿಡಿಯಲು ಹೋಗಿ ಜಾರಿ ಬಿದ್ದ ಆ ಘಳಿಗೆ..
ಮೊಗದ ಹಿಂದಿದೆ ನಾಚಿ ನೀರಾದ ಮನವು
ಸದಾ ನಿನ್ನನ್ನೇ ಪರಿತಪಿಸುವ ಬಯಕೆಯೊಳು ನಾನಿರಲು,
ನಿನ್ನ ಮನದ ಮಾತನ್ನು ನಾ ಹೇಗೆ ತಾನೇ ಕೇಳಲಿ..
ಕೇಳಿದರೂ ಹೇಗೆ ತಾನೇ ವಿವರಿಸಲಿ..!!
ಆ ನಿನ್ನ ವಿಶಾಲ ಮೈಕ್ಕಟ್ಟು,ಗೆದರಿದ ತಲೆ ಕೂದಲು..
ಸದಾ ನಗುವ ಸೂಸುವ ಆ ನಿನ್ನ ಗುಳಿ ಕೆನ್ನೆ..
ಮತ್ತೆ ಮತ್ತೆ ನೋಡ ಬಯಸುವ ಆ ನಿನ್ನ ಸುಂದರ ವದನ..
ಸಾಕಿಷ್ಟು ಅಂತ ಅನಿಸಿದರೂ ಒಳಗೊಳಗೆ ಏನೋ ಕಾಡುವ ಬಯಕೆಗಳು..
ಹೇಳು ನೀನು ಯಾರು..?
ಮನಸ್ಸು ದೋಚಿದ ಇನಿಯನೋ ಅಥವಾ ಹೃದಯಕ್ಕೆ ಹತ್ತಿರವಾದ ಗೆಳೆಯನೋ..!!
ಸ್ನೇಹಕ್ಕೂ ಮಿಗಿಲಾದ ಬಂಧನವಿದೆಯೇ..?ಬಹುಶಃ ಇದ್ದರೂ ಆ ಸಂಬಂಧಕ್ಕೆ ಅರ್ಥವಿದೆಯೇ..??
ತಿಳಿಯದಾಗಿದೆ ನನಗೀಗ ಮುಂದಿನ ಸಾಲುಗಳು..
- ನಮಿತ ಗಟ್ಟಿ
10 Dec 2017, 02:06 pm
Download App from Playstore: