ಅರಸಿ ಬಾ ನನ್ನ......
ಇನಿಯ ಇನಿಯ
ಎಷ್ಟು ಕಾಡುವೆ
ನೀ ನನ್ನ.....
ಹುಡುಕುತ ಅರಸಿ ಬಾ ಈ
ನಿನ್ನ ಹೃದಯದರಸಿಯನ್ನ....
ಮುತ್ತಿನ ಮನೆಯಲ್ಲಿ
ಮರೆಯಾಗಿರುವೆ ನಗುವಲ್ಲಿ
ಹುಡುಕುತ ಬಾ ನನ್ನ....
ನಿನ್ನೆದೆಯ ಗೂಡಲ್ಲಿ
ಅವಿತು ಕೋಂಡಿರುವೆ
ಜಗವೆಲ್ಲ ಹುಡುಕುತಾ
ಬಾ ನನ್ನ....
ನಿನ್ನುಸಿರ ಉಸಿರೋಳಗೆ
ಮರೆಯಾಗಿರುವೆ
ಮರಗಳ ನಡುವೆ
ಹುಡುಕುತಾ ಬಾ ನನ್ನ......
ನಿನ್ನ ಮನದ ಅರಮನೆಯೊಳಗೆ
ಬಚ್ಚಿಕೋಂಡಿರುವೆ ಅರಮನೆಯಲ್ಲ
ಹುಡುಕುತಾ ಬಾ ನನ್ನ.......
ನಿನ್ನೋಲವ ಪ್ರೀತಿಯಲಿ
ಬಂದಿಯಾಗಿರುವೆ ಬಿಡಿಸಲು
ಬಾ ನನ್ನ ಬಳಿಗೆ.....
ಎಲ್ಲಿ ಹುಡುಕುವೆ ಈ ನೀನ್ನ
ಪ್ರಾಣವನ್ನ ನಿನ್ನೋಳಗೆ
ಬೆರೆತಿರುವೆ ಕಂಡುಕೊ ನನ್ನ.....
ನನ್ನ ಇನಿಯ ಅಲೆದು ಅಲೆದು
ಬಂದು ಸೇರಿಕೊ ನಿನ್ನ ನೀನೆ..........
- ರಾಗಸಿರಿ....
10 Dec 2017, 02:11 pm
Download App from Playstore: