ಅರೆ ಅರೆ
ಅರೆ ಅರೆ ಅರೆಗಳಿಗೆ ಬಂದು ಹೋದರೆ ಹೋಗುವುದೇನು ನಿನ್ನ ಗಂಟು,
ನನ್ನಲ್ಲಿ ನಿನ್ನ ಉಕ್ಕಿ ಹರಿಯುವಷ್ಟು ಪ್ರೀತಿ ಉಂಟು, ಒಮ್ಮೆ ಕಂಡರೆ ಇನ್ನು ಬಲವಾಗುವುದು ನಮ್ಮ ನಂಟು.
ಮುಂದಿನ ಜನ್ಮದಲ್ಲಿ ಸಿಕ್ಕಿ ಮಾಡುವುದೇನುಂಟು
ಈ ಜನುಮ ಕೊನೆವರೆಗೂ ಜೊತೆಗಿರಸಲು
ಸಾಕು ಮೂರು ಗಂಟು,
ನಿನ್ನನ್ನ ರಾಣಿಯಂತೆ ನೋಡಿಕೊಳ್ಳುವ
ಅರ್ಹತೆ ನನ್ನಲ್ಲುಂಟು.
ಕುಟ್ಟಿ ಪುಡಿ ಮಾಡದಿರಿ ಕಂಡ ಕನಸನಂತು
ನೀ ಕೊಡುವ ಪ್ರೀತಿಗೆ ನಿನಗೊಂದು
ಚೆಲುವಾದ ಬಹುಮಾನ ಉಂಟು,
ಎಂದೆಂದೂ ನಿನ್ನೊಡನೆಯೆ ನನ್ನ ಜೀವನದ
ಮನಸು ಮುನಿಸುಗಳ ಅಂಟು.
- ಚುಕ್ಕಿ
10 Dec 2017, 02:47 pm
Download App from Playstore: