ಅಂಗುಲೀಮಾಲ-ಕಥನ ಕವನ

ಅವನು ರಾಕ್ಷಸನಿಗೂ‌ ಸವಾಲೆಸುಯುವ ಕ್ರೂರ ನರ
ಕೊರಳಲಿ ಅವನಿಗೆ ಸಿಕ್ಕಿ ಸತ್ತವರ ಬೆರಳುಗಳ ಮಾಲೆ
ತಿಳಿಯದು ಅದು ಅಲಂಕಾರಕ್ಕೊ ಕೊಂದವರ ಲೆಕ್ಕಕ್ಕೊ

ಕಣ್ಣುಗಳಂತು ಬೆಂಕಿಕಾರುವ ಕೆಂಡದುಂಡೆ
ಆ ಅಗ್ನಿಯು ಸುಡದೆ ಉಳಿಸಬಹುದೇನೊ ಅವನಲ್ಲ
ಪ್ರೀತಿ ಪ್ರೇಮದ ಕಿಂಚಿತ್ತು ಅರಿವಿರದ ಕಲ್ಲು ಮನಸು

ನರಬಲಿಗೆಂದು ಕಾಯುವುದೇ ಅವನಿಗೆ ನಿತ್ಯ ಕಾಯಕ
ಕಂಡವರ ಕೊಂದು ಗಹಗಹಿಸಿ ನಗುವುದಷ್ಟೆ ಅವಶ್ಯಕ
ನೆಲಕರಿದ ಬಡಪಾಯಿ ಜನರ ರಕ್ತದ ವಾಸನೆಯೆ ಅವನಿಗೆ ಉಪಾಸನೆ

ಒಮ್ಮೆ ಬಂದನೊಬ್ಬ ಅವನೆದುರು ನಿತ್ಯ ಹಸನ್ಮುಖಿ
ಸಾಧಾರಣ ಅಂಗಿಯವ,‌ ಖಾಲಿ ಖಾಲಿ ಕೈಯವ
ಕಂಡವರೂ ಹಾಗೆ ಧಿಗ್ಬ್ರಾಂತರಾಗಿ ಮುಗುಳ್ನಗುವ ಸೂಸುವಂತವ

ಹಾಗೆ ಬಂದವನ ಬಲಿ ಪಡೆಯುವಾಸೆ ನರ ರಾಕ್ಷಸನಿಗೆ
ಈ ದೇಹವು ಒಂದು ದಿನ ಖಾಲಿಯಾಗಲೆಬೇಕೆಂದರಿತವ ಖಾಲಿ ಕೈಯವ
ಇನ್ನೆಲ್ಲಿ ಬರಬೇಕವನಿಗೆ ಭಯ, ನೋವು, ಜೀವಕ್ಕಾಗಿ ಹೌಹಾರಿ ಪರದಾಟ ಹಾರಾಟ

ಸಾವಿನ‌ೂರಿಗೆ ಜೀವವಟ್ಟುವ ಯಮನ ಧೂತ‌‌ ನಾನೆಂದ ಕ್ರೂರಿ
ಜೀವವಿರದೆ ತಣ್ಣಗಾದ ದೇಹದ ಬೆರಳುಗಳು‌ ಸೇರಲಿ ಎನ್ನ ಕೊರಳ ಇಂದು ಎಂದು ನಕ್ಕ
ನೆಲವೂ ಹೆಪ್ಪುಗಟ್ಟಿದ ರಕ್ತದ ಕಮಟ ವಾಸನೆಯ ನೆನೆದು ಕಂಪಿಸುವಾಗೆ

ಅತ್ತ ನಿಂತ ಖಾಲಿ ಕೈಯ ತುಂಬು ಮನಸಿನವ ‌ಕೇಳುತ್ತಲಿದ್ದ
ಇತ್ತ ಕಡೆ ಸಿಡುಕುತ್ತಲೆ ಇದ್ದ, ಗದರುತ್ತಲೆ ಇದ್ದ ನರ ರಾಕ್ಷಸ
ಅತ್ತ ಅವ ನಗುತ್ತಲೇ ಇದ್ದ ಅಳುಕಲೂ‌ ಇಲ್ಲ ಕದಲಲೂ ಇಲ್ಲ

ಮಿತಿ ಮೀರಿತ್ತು ಎದುರಿಗೆ ನಗುತ ನಿಂತವನ ಕಂಡು ಕೋಪ
ಎತ್ತಿಯೇ ಬಿಟ್ಟ ಆಯುಧ ಬಲಿಯಾಗು ನೀನೆಂದು
ಇವ ನಗುತ್ತಲೆ ಹೇಳಿದ ಸಾಕ ನನ್ನ ಜೀವ ಈ ಹತ್ತು ಬೆರಳು

ಬೀಸಿತ್ತು ಕತ್ತಿ, ಗಾಳಿ ಸೀಳಿ ಕೊರಳತ್ತ ಇನ್ನೇನೊ ನೆರಕ್ಕುರುಳಬೇಕು ಶಿರ
ಹಸನ್ಮುಖಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿಯೇ ಬಿಟ್ಟ ರಾಕ್ಷಸ
ಭಯವಿಲ್ಲ, ನೋವಿಲ್ಲ , ಚೀತ್ಕಾರವಿಲ್ಲ ಹರೇ ನಗುವೂ ಕಿಂಚಿತ್ತು ಮಾಸಿಲ್ಲ

ಸೋತ, ಸೋತು ಹೋಗಿಯೇ ಬಿಟ್ಟಿದ್ದ , ನೆಲಕ್ಕೆ ಮಂಡಿಯೂರಿದ್ದ
ಜೀವಕ್ಕಾಗಿ ಅವನೆದುರು ಬೇಡುವವರ ಕೊಂದು ವಿಕೃತ ಖುಷಿ ಪಟ್ಟವ
ಆಶ್ಯರ್ಯಕ್ಕೊ, ನನ್ನೆದರು ಸಾವಿಗೂ ಹೆದರದವನಿರುವನೆಂದೋ, ಇಲ್ಲ ಜೀವದ ಬೆಲೆ ತಿಳಿದೋ

ಬೆಂಕಿಯುಂಡೆ‌ ಕಣ್ಣು, ಹೊತ್ತಿ‌ ಉರಿಯುತ್ತಿದ್ದ ಮನಸು ತಣ್ಣಗಾಗಿತ್ತು
ಯಾರಿವನು ‌ನನ್ನನ್ನೂ ಮುಟ್ಟದೆಯೂ ನೆಲಕ್ಕುರುಳಿಸಿದವನು
ಕೇವಲ ಪ್ರಶ್ನೆಗಳು, ಇನ್ನೂ ಉಳಿದದ್ದು ಅವರಿಬ್ಬರ ತಣ್ಣನೆಯ ಸಂವಾದ

ಅತ್ತ ಹಸನ್ಮುಖಿ‌ ನಿತ್ಯ ಸುಖಿ ಖಾಲಿ ಕೈಯ ತುಂಬಿದ ಹೃದಯದ ಬುದ್ಧ ನಿಂತಿದ್ದ
ಬುಸುಗುಡುವ ಉಸಿರಿಗೆ ಸುಡುತ್ತಿದ್ದ ಗಾಳಿಯೂ ತಣ್ಣಗೆ ಬೀಸುತ್ತಿದೆ ಎನಿಸತೊಡಗಿತವನಿಗೆ ಈಗ
ಎಂದೂ ಯಾರ ಮಾತನು ಕೇಳದೆ ಸ್ತಬ್ಧವಾಗಿದ್ದ ಕಿವಿಗಳು
ಚೇತರಿಸಿ‌ ನಿಮಿರಿ ನಿಂತಿದ್ದವು ಆಲೀಸಲು

ಶಾಂತಿಪ್ರಿಯ , ನಿತ್ಯ ಸರ್ವಜನ ಪ್ರೇಮಿ ಮಾತಾನಾಡುತ್ತಲಿದ್ದ
ಇವ ಕೇಳುತಲೆ‌ ಇದ್ದ, ಅವನ ಮನಸಿಗಂಟಿದ ದುಷ್ಟತನದ ಪೊರೆಯ ಕಳುಚುತ್ತ ಇದ್ದ
ಮನಸು ಹಗುರವಾದಂತೆನಿಸುತ್ತಿದೆ, ಲೋಕದೊಳಗೆಲ್ಲೊ ದೊರೆಯದ ಹರುಷ ಆವರಿಸಿದಂತಾಗಿ ಪುಳಕಿನಾಗುತ್ತಿದ್ದ

ಬುದ್ಧನೇಳಿದ ಮಾತುಗಳಿಗೆಲ್ಲ ಒಪ್ಪಿ ಶಾಂತಿ ಬಯಸಿ ನಿಂತಿದ್ದ
ಜೀವಗಳ ಕೊಂದು ನಗುತ್ತಿದ್ದವ, ತನ್ನೊಳಗಿನ‌ ರಾಕ್ಷಸನ ಕೊಂದು ನಗುತ್ತಿದ್ದ
ಪ್ರೀತಿ,‌ಪ್ರೇಮ ಕರುಣೆಗಳ ಮನಸೊಳಗೆ ತುಂಬಿಕೊಂಡಿಯೇ ಬಿಟ್ಟಿದ್ದ
ಜಗವೇ ನಿಬ್ಬೆರಗಾಗುವ ಹಾಗೆ ಕೆಂಡದುಂಡೆಯ ಕಣ್ಣಲ್ಲಿ‌ ನಗುವ ತುಂಬಿ ಸುಖಿಯಾಗಿ ನಿಂತೇ ಬಿಟ್ಟಿದ್ದ ಅಂಗುಲೀಮಾಲ.

- ಶ್ರೀಕಾವ್ಯ

10 Dec 2017, 04:22 pm
Download App from Playstore: