ಬಂಧನದ ಸಂಬಂಧ
ಅಂಧಕಾರವು ಅಂಟಿಕೊಂಡಿಹುದೆನ್ನ
ಅಸ್ಥಿಪಂಜರದೋಲು ಮೌಡ್ಯತನದಿ
ಬಂದ ಬಿಡಿಸೆಂದು ಬೇಡಿದೆನು ನಿನ್ನ
ಸಂಸಾರ ನೌಕೆಯ ನಾಯಕಳಾಗಿಸಿದೆ ನೀನೆನ್ನ
ಹದಿಹರೆಯದಾಕೆ ನಾನಾಗಿ
ಕೂಗಿಕೂಗಿ ಕರೆದೆ ನಿನಗಾಗಿ
ಮೋಹದ ಬಲೆಯ ಬಿಡಿಸೆಂದೆ
ಕಗ್ಗತ್ತಲಲ್ಲಿ ಕಂಬನಿಯ ಮಳೆಗರೆದೆ
ತೊರೆಯೊಂದು ತವಕದಿ
ಕಡಲನೆ ಅರಸುತ ಓಡುವಂತೆ
ಚಿಗರೆಯೊಂದು ವ್ಯಾರ್ಘನಿಂದ
ಪಾರಾಗಲವಣಿಸುವಂತೆ
ನಿನ್ನ ಕರುಣೆಯ ಕೃಪಾಸ್ತಕಾಗಿ ನಾಬೇಡಿದೆ
ಅನುಕ್ಷಣ,ಅನುದಿನ,ಅನುಗಾಲ ನಿನಗಾಗಿ ತಾಯೆ
ಶಾರಧ
- ಶಕುಂತಲಾ
11 Dec 2017, 04:26 pm
Download App from Playstore: