ಮದುವಣಗಿತ್ತಿ.......
ಕನಸಿನ ಉರಿನ ತುಂಬ
ಚಿತ್ತಾರದ ರಂಗವಲ್ಲಿ
ಬೀದಿ ಬೀದಿಲಿ ಹೋತ್ತು
ಹೊರಟವು ಹಕ್ಕಿಗಳ ಹಾಡು
ಮುಗಿಲ ತುಂಬೆಲ್ಲ ಉದುರಿದವು
ಹೂಮಳೆಯ ಅಷ್ಕತೆಗಳು
ಮೈಗೆಲ್ಲ ಹಸಿರ ಗಂದವ ಹಚ್ಚಿಕೋಂಡಾಳ
ಸಿಂಗಾರಗಾತಿ ಭೂತಾಯಿ
ಹಬ್ಬಿನಿಂತಿರೂ ಹಿಮಗಳೆ
ಇವಳ ಕಾಲ್ಗೆಜ್ಜೆ ಎಷ್ಟು ಸದ್ದು
ಎಲ್ಲರೆದೆಯ ಒಳಗೆ ಸದ್ದು ಮಾಡಿಹಳೂ
ಹಸಿರಂಚಿನ ಹೂಸ ನೆರಿಗೆ ಸೀರೆ ಉಟ್ಟಾಳ
ಚುಕ್ಕಿ ಚಂದ್ರಮಗಳ ಮಾಲೆ ಹಾಕ್ಯಾಳ
ಮುತ್ತು ಮಣಿಗಳ ವಡ್ಯಾನ ಹಾಕ್ಯಾಳ
ಕಪ್ಪು ನೆರಳ ಕಾಡಿಗೆ ಕಣ್ಣಿಗೆ ಇಟ್ಟಾಳ
ಸಂಜೆ ಹೊಂಬಣ್ಣವ ತಿಲಕ ಮಾಡಿ ಇಟ್ಯಾಳ ಹಣೆಗೆ
ತವರುರ ಬಳೆಯ ತೊಟ್ಯಾಳ
ಹೋತೊಟವ ಮೊಗ್ಗಿನ ಮಾಲೆ
ಮುಡಿಗೆ ಮುಡಿದಾಳ
ಗಣಿಯುರ ಜುಮಕಿ ಕಿವಿಗೆ ಹಾಕ್ಯಾಳ
ಇನಿಯನ ಅರಸುತ್ತ ಹೊಸ ಬಾಗಿಲಲ್ಲಿ ಕುಂತ್ಯಾಳ
ಇವಳ್ಯಾರು ಗೂತ್ತ
ಸರಿಯುರ ಸಿಂಗಾರಿ
ಮುಗಿಲೂರ ಬಂಗಾರಿ
ತವರುರ ವೈಯ್ಯಾರಿ
ದರೆ ಹೊತ್ತ ಚಿನ್ನಾರಿ
ಸುಂರದ ನಾಡ ಸುಂದರಿ
ಮುತ್ತಿನಂತ ಮದುವಣಗಿತ್ತಿ ..........
ಇವಳಿಗ್ಯಾರೆ ಸರಿಸಾಟಿ.......
- ರಾಗಸಿರಿ....
12 Dec 2017, 12:55 pm
Download App from Playstore: