ಕಲ್ಪನೆ (ಚುಟುಕು)

ತರಾವರಿ ಸುಂದರ ಕಲ್ಪನೆಗಳ
ಹೂವುಗಳನ್ನೆಲ್ಲ ಕೊಯ್ದು ಕೊಯ್ದು
ಬುಟ್ಟಿ‌ ತುಂಬಾ ತುಂಬಿಸಿದ್ದಾಗಿದೆ
ಬಾಡುವ ಮುನ್ನ ಮಾಲೆ ಮಾಡಿ
ಇರಿಸುವುದೊಂದೆ ಬಾಕಿ ಮುಡಿಗೆ


ಕಲ್ಪನೆಯ ಕೂಸು ಒಡಲಲ್ಲಿ
ಚಿಗುರಿತ್ತೆಂದರೆ ಶುರು
ಸಂಭ್ರಮ ಚಡಪಡಿಕೆ ಭಯ

ಜೊತೆಗೆ ಬೆಸೆದ‌ ಕೈಗಳು
ಜಾರುವ ಮುಂಗುರುಳು
ಕಣ್ಣ ನೋಟದ ಬೆಳದಿಂಗಳು
ನಿನ್ನೊಟ್ಟಿಗೆ ಸಪ್ತಪದಿ ತುಳಿದಂತೆ ಹೆಜ್ಜೆಗಳು
ಆ ಕಲ್ಪನೆಯ ನೆನಪಿಗೆ ತುಂಬಿ ನಿಂತಿದೆ ಕಂಗಳು

- ಶ್ರೀಕಾವ್ಯ

15 Dec 2017, 01:01 pm
Download App from Playstore: