ನೋವಿನಲ್ಲು ನಲಿವು ಕಾಣುವಳವ್ವ!

ಅಣುವಾಗಿ ಗರ್ಭವ ಸೇರಿದ
ಕೂಸಿನ ಚೊಚ್ಚಲ ಬಯಕೆ
ತಾಯಿ-ತನದ ಆನಂದದ
ಹೊನಲು ಹೊಮ್ಮುವುದು
ಲತೆಯ ಅಂಕುರವು ವಿಕಸಿಸುವಂತೆ!

ನವಮಾಸ ಕಳೆವಳು ತಾಯಿ
ನವರಸಗಳ ಸಮಾಗಮದಲಿ
ಮಕ್ಕೋಟಿ ದೇವರ ನೆನೆವಳು
ಮುಕ್ಕಣ್ಣನಂತ ಮಗನಿಗಾಗಿ
ಉದರ ಬಾರವ ನೀಗುವಳು ಮೇಣದ ಬೆಳಕಲಿ!

ಅಡೆದವರ ಅಡಿಗಡಿಗೆ ನೆನೆಯುತ
ಅಡೆದವಳ ಮಡಿಲ ನೆನೆಯುತ
ಒಡಹುಟ್ಟಿದವರ ಬಳಿಗೆ ಕರೆಯುತ
ಒಡನಾಡಿಗಳ ಸಲ್ಲಾಪ ಮೆಲ್ಲುತ
ಪ್ರಸವತೆಗಾಗಿ ಪರಿತಪಿಸುತ ದೂಡುವಳು ದಿನಗಳ!

ಹರಿವ ತೊರೆ,ಬೀಸೊ ಗಾಳಿ
ಬೆಳಗೊ ಇನ,ತೊಳೆವ ಇಬ್ಬನಿಯಂತೆ
ತನ್ನೆಲ್ಲ ನೋವ ನುಂಗಿ ನೀಡುವಳು
ತನ್ನ ಕರುಳ ಕುಡಿಗೆ ಜೀವ,
ಜಗವ ಬೆಳಗುವ ತ್ಯಾಗಮಯಿ ತಾಯಿ!



ಶಾರಧ

- ಶಕುಂತಲಾ

15 Dec 2017, 09:34 pm
Download App from Playstore: