ಕಾಯುತಿರುವ ಪ್ರೇಮಿ..

ನನ್ನೊಲವ ಗುಡಿಯ ದೇವತೆ
ಮರೆಯಾಗಿ ನೀ ಎಲ್ಲಿ ಕುಳಿತೆ
ನಗುವೂ ಸುಳಿಯದಾಗಿದೆ ಸನಿಹ
ಕಣ್ಣುಗಳ ನೋಟ ಬೆಸೆಯದ ವಿನಹ

ನಿನ್ನ ದಾರಿ ಕಾಯುತಿರುವ ಪ್ರೇಮಿ ನಾನು
ಕಾಣದಾಗಿರುವೆ ನನಗೆ ಏಕೆ ನೀನು
ಬಾಡಿತೇನು ಪ್ರೀತಿ, ನಿನಗಾಗಿ ತಂದ ಹೂವಿನಂತೆ
ನೋವಲಿ ತೆರೆದು ಕುಳಿತಿರುವೆ ನೆನಪುಗಳ ಸಂತೆ

ನನ್ನ ನೋಡಿ ಮರುಗಿ, ಮುಳುಗುತಿರುವ ನೇಸರ
ಅವನಿಗೂ ಆಯಿತೇನೋ ಚಡಪಡಿಕೆ ಕಂಡು ಬೇಸರ
ಸಾವಿನ ಮನೆಗೆ ಬುನಾದಿ, ನೀ ಕಾಣದ ಈ ಹಾದಿ
ನೀನಿರದೆ ಉಸಿರುಳಿಯದು ಕಣೇ ಈ ಜೀವದಿ

ಹೇ ಗೆಳತಿ ನೀ‌ ಕ್ಷೇಮವಿರುವೆ ತಾನೆ
ತಾಳಲಾಗುತ್ತಿಲ್ಲ ನೀನಿರದ ನೋವಿನ ಬೇನೆ
ಮನಸಲಿ ನೂರಾರು ಬೇಡದ ಆಲೋಚನೆ
ಎಲ್ಲವ ಸುಳ್ಳಾಗಿಸಿ ಉಳಿಸಬೇಕು ನನ್ನ ಆ ದೇವನೆ

- ಶ್ರೀಕಾವ್ಯ

17 Dec 2017, 01:28 pm
Download App from Playstore: