ದಾರಿ

1.ನಾ ಹೋಗೋ ದಾರಿಯಲ್ಲಿ
ಎದುರಾಗಿ ನೀನೇಕೆ ಬಂದೆ
ದಿನವಿಡೀ ನಿನ್ನದೇ ನೆನಪಿನಲ್ಲಿ
ಕನಸುಗಳ ಜೊತೆಯಲ್ಲಿ ನಾ ತೇಲಿಹೋದೆ!



2.ನೀ ಕಟ್ಟಿದ ಪ್ರೀತಿಯ ಅರಮನೆಯಲ್ಲಿ
ಕಾಲ ಕಳೆಯುತ್ತಿರುವೆನು ಏಕಾಂಗಿಯಾಗಿ
ನೀ ಬರುವ ದಾರಿಯಲ್ಲಿ
ಕಾದು ಕುಳಿತಿರುವೆನು ನಿನಗಾಗಿ!



3.ಸರಿಯಾದ ದಾರಿ ತೋರಿಸುವ ಗುರುಗಳಿಗೆ
ನಾವು ಸಲ್ಲಿಸಬೇಕು ನಮನ
ಕೆಟ್ಟ ಚಟ ತುಂಬಿದ ದುಷ್ಟ ಜನರಿಂದ
ದೇಶ ರಕ್ಷಿಸುವಲ್ಲಿರಬೇಕು ನಮ್ಮ ಗಮನ!

- ಪ್ರಿಯಾಂಕ

17 Dec 2017, 04:05 pm
Download App from Playstore: