ಅಪ್ಪನೆನಿಸಿಕೊಂಡ ಆ ಕ್ಷಣ
ಹೇಗೆಂದು ವರ್ಣಿಸಲಿ ಅಪ್ಪನೆನಿಸಿಕೊಂಡ ಆ ಕ್ಷಣವನು
ಬಹು ಕಾಲದ ಆಸೆಯ ನೆರವೇರಿಸಿ
ಅಂದು ನೀ ಕೊಟ್ಟೆ ಸಹಿ ಸುದ್ಧಿಯ
ಜೇನಿಗಿಂತಲು ಮಿಗಿಲಾದ ಮನಸ್ಸಿಗೆ ಹಿತವಾದ ಖುಶಿಯನು
ನಮ್ಮಿಬ್ಬರ ಪ್ರೀತಿ ತುಂಬಿರಲು ನಿನ್ನುಧರದಲಿ
ನಾನೆ ಧನ್ಯನು ಇಂದು
ಎದೆಬಡಿತ ಕೇಳಿದ ಆ ಕ್ಷಣ ಮೈಯ್ಯಲೇನೋ ರೋಮಾಂಚನ
ಕಂಡು ಮಗುವಿನ ಚಲನವಲನ ತುಂಬಿತ್ತು ಎನ್ನ ಮನ
ಮರೆಯಲಾರೆ ಎಂದೆಂದಿಗೂ ಈ ನೀನಿತ್ತ ಉಡುಗರೆಯ
ಧನ್ಯವಾದಗಳು ನಿನಗೆ ಓ ನನ್ನ ನಲ್ಲೆ
- ರಘು
21 Dec 2017, 11:55 am
Download App from Playstore: