ಮರೆತಿದ್ದೆವೆ ನಾವು
ಮರೆತ್ತಿದ್ದೆವೆ ನಾವು ಹಳೆಯ ಪದ್ದತಿಗಳನ್ನು
ಬಿಸುವ ಕಲ್ಲಿನ ರಬಸವನ್ನು
ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು
ರಂಟೆ ಕುಂಟೆಗಳ ನಂಟನ್ನು
ಮರೆತ್ತಿದ್ದೆವೇ ನಾವು ಮರೆತ್ತಿದ್ದೆವೆ
ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು
ಗರತಿಯರ ಬಾಯಲ್ಲಿ ಬರುವ ಜನಪದ ಹಾಡುಗಳನ್ನು
ಡೊಳ್ಳು ಕುಣಿತ ವೀರಗಾಸೆಯಂತಹ ಕಲೆಗಳನ್ನು
ಮರೆತ್ತಿದ್ದೆವೆನಾವು ಮರೆತ್ತಿದ್ದೆವೆ
ಗೌರಿ ಹಬ್ಬದಲ್ಲಿ ರೇಷ್ಮೆಯ ಸೀರೆ ಉಟ್ಟು ಬರುವ ಚಲುವೆಯರನ್ನು
ಅದನ್ನು ನೋಡಲು ಕುಳಿತ ಹುಡುಗರ ಗುಂಪನ್ನು ಕಣ್ಸನ್ನೆ ಮೂಲಕ ಉಂಟಾಗುವ ತುಂಟ ಪ್ರೀತಿಯನ್ನು
ಮಾತು ಕತೆಗಳೊಲಿಲ್ಲದೆ ಅನುಭವಿಸುವ ವಿರಹ ವೇದನೆಯನ್ನು
ಮರೆತ್ತಿದ್ದೆವೆ ನಾವು ಮರೆತ್ತಿದ್ದೆವೆ.
ಅಜ್ಜ ಅಜ್ಜಿಯರು ಕತೆ ಹೇಳುವ ರೀತಿಗಳು
ಹಬ್ಬ ಹರಿದಿನಗಳಲ್ಲಿನ ಆಟೋಟಗಳು
ದೊಡ್ಡಾಟ ಬಯಲಾಟ ನಾಟಕಗಳು ಅಳಿವಿನಂಚಿನಲ್ಲಿ ಇವೆ ಇವು ಅಳಿವಿನಂಚಿನಲ್ಲಿವೆ..
.ಅಮರ್ತ್ಯ ಮಾರುತಿ ಯಾದವ್..
- ಅಮರ್ತ್ಯ ಮಾರುತಿ
21 Dec 2017, 02:06 pm
Download App from Playstore: