ಕೊಲ್ಲುವುದಾದರೆ ಕೊಂದುಬಿಡು

"ಕುಡಿ ನೋಟಕ್ಕೆ ನಾಚಿ
ನಾಚಿಕೆಯ ಪ್ರೀತಿಯ
ಮುತ್ತು ಸುರಿಸಿ
ಅಂಜಿಕೆಯ ನುಡಿ ನುಡಿದು
ನನ್ನ ಹೃದಯದಲ್ಲಿ
ಪ್ರೀತಿಯ ಬೀಡು ಬಿಟ್ಟು
ನನ್ನ ಮನಸಲ್ಲಿ
ಪ್ರೀತಿಯ ರಂಗೋಲಿ ಇಟ್ಟವಳೇ ನೀ ಗೆಳತಿ.

"ಏಕೆ......
ನನ್ನ ಮುದ್ದುಗೆಳತಿ ಆಡುತ್ತಿರುವೆ
ಹೃದಯಾದ ಬಡಿತ ನಿಲ್ಲಿಸೋ
ಚುಚ್ಚು ಮಾತುಗಳನಾ,

"ಚುಚ್ಚು ಮಾತುಗಳಿಂದ
ಚುಚ್ಚಿ ಚುಚ್ಚಿ...........
ಕೊಲುತ್ತಿರುವೇ ಏಕೆ... ಹೇಳೇ
ನನ್ನ ಹೃದಯಾದ ದೇವತೆ,

"ಕೋಲುವೆಯಾ
ಕೊಂದುಬಿಡು ಗೆಳತಿ ನಿನ್ನ ಕೈಯಾರೇ
ನಿನ್ನ ಮನಸಾರೆ ಪ್ರೀತಿಸಿದ
ನನ್ನ ಹೃದಯನಾ,

"ಕೋಲುವಾ ಮುನ್ನ ತಿಳಿಯೇ
ನಾ ಮನಸಾರೆ ಪ್ರೀತಿಸುತ್ತಿರುವೆ
ನಿನ್ನ ಕೈ ಹಿಡಿದು ಹಸೆಮಣೆ ಏರಿ
ಸಪ್ತಪದಿ ತುಳಿಯುವಾ ಘಳಿಗೆಗಾಗಿ,

"ನಾ ಸತ್ತರು ಚಿಂತೆಯಿಲ್ಲ
ನೀ ಇಲ್ಲದ ಈ ಲೋಕದಲ್ಲಿ
ಏಕೆ ಮೌನವಾಗಿರುವೇ
ನನ್ನ ಪ್ರತಿಯ ದೇವತೆ...............ಹೇಳು.

***ರಾಜು ಗುಡಿ***ಹಾಸನ

- ರಾಜು ಹಾಸನ

21 Dec 2017, 03:48 pm
Download App from Playstore: