ಜನ್ಮ ದೇವತೆ

"ನನ್ನ ಮುದ್ದು ಅಮ್ಮ
ನಿನ್ನ ಮಮತೆಯ ಮರೆಯಲ್ಲಿ ಸಾಗುತ್ತಿರುವೆ
ನಿನ್ನ ಕಂದ ನಾ ಅಮ್ಮ

"ನಿನ್ನ ಪ್ರೀತಿಯ ಪ್ರಣತೆಯಲಿ
ಬೆಳೆಯುತ್ತಿರುವ ಚಂದಿರ
ನಿನ್ನ ಕಂದ ನಾ ಅಮ್ಮ

"ನಿನ್ನ ಕರುಣೆಯ ಕೈಗನ್ನಡಿಯಲ್ಲಿ
ಹೊಳೆಯುತ್ತಿರುವ ನಕ್ಷತ್ರ
ನಿನ್ನ ಕಂದ ನಾ ಅಮ್ಮ

"ನೀ ಕಾಡಿಸಬೇಡ, ನೋಯಿಸಬೇಡ,
ನನ್ನ ಒಬ್ಬಂಟಿ ಮಾಡಿ ದೂರ ಹೋಗುವೆಯ
ನಿನ್ನ ಕಂದ ನಾ ಅಮ್ಮ

ನೀ ಕೊರಗಬೇಡ, ಮರುಗಬೇಡ
ಕಣ್ಣೀರಡಬೇಡ, ನಾ ನಿನೊಂದಿಗಿರುವೆನು ಅನುಗಾಲ
ನಿನ್ನ ಕಂದ ನಾ ಅಮ್ಮ.......

- ರಾಜು ಹಾಸನ

21 Dec 2017, 10:42 pm
Download App from Playstore: