ಪುಟ್ಟನ ಮನೆ
ನಮ್ಮನೆ ಒಂದು ಪುಟ್ಟ ಗೂಡು
ಎಲ್ಲರು ಕೂಡಿರೋ ಜೇನುಗೂಡು
ಪ್ರೀತಿ ಮಮತೆಯೆ ಆಧಾರ ನೋಡು
ಕೂಡಿ ಹೇಳುವ ಒಲವಿನ ಹಾಡು
ಅಣ್ಣ ಅಕ್ಕ ಅಮ್ಮ ಅಪ್ಪ
ಚಿಕ್ಕಮ್ಮನ ಜೋತೆ ಚಿಕ್ಕಪ್ಪ
ನನ್ನ ಮುದ್ದಿನ ದೊಡ್ಡಪ್ಪ
ಅಜ್ಜಿಯ ನಗಿಸುವ ತಾತಪ್ಪ
ಇವರ ಕಣ್ಮಣಿ ನಾನಪ್ಪ
ನಮ್ಮ ಮನೆಯಲಿ ಪ್ರತಿದಿನ ಹಬ್ಬವೇ
ನಿತ್ಯವೂ ಸಡಗರ ಸಂಭ್ರಮವೇ
ನಂಬಿಕೆಯ ಹರಸುವ ಮನವದುವೇ
ಸಂಭಂದಗಳ ಗಟ್ಟಿಗೊಳಿಸುವೆ
ಸ್ವಗ೯ವೇ ನಾಚುತ್ತೀದೆ ನಮ್ಮನ್ನು ನೋಡಿ
ನಾನು ಬರಲೇ ನಿಮ್ಮಯ ಜೋಡಿ
ಏನ್ನುತ ಬರುತಿದೆ ಓಡಿ ಓಡಿ
ನಮ್ಮಯ ಜೋತೆಗೂಡಿ
ವಿಶ್ವಾಸದಿ ಕೈ ನೀಡಿ.....
ಪ್ರೀತಿಯೆ ನಮ್ಮ ಒಡನಾಡಿ..
- Bhagya Girish
22 Dec 2017, 11:06 am
Download App from Playstore: