ನೀಲವೇಣಿ
ಮೇಘಶ್ಯಾಮನ
ಮುರಳಿ ಲೋಲನ
ಗೊಲ್ಲ ಗೌಡನ
ನಲ್ಲ ನಯನನ
ಧರ್ಮ ಗುರುವಿನ
ಮಧುರ ಮಾತಿನ
ನ್ಯಾಯ ಬೋಧನ
ನೆನೆದು ಹಾಡುತಿರಲು
ನೀಲವೇಣಿಯವಳು ಬಾಗಿ
ಇಣುಕಿ ನೋಡುತಿಹಳು
ಕಣ್ಣ ರಪ್ಪೆಯ ಕುಣಿಸುತಲವಳು
ಅರ್ದಚಂದ್ರನ ಮರೆಮಾಚಿ ನಿಂತು
ಇಂಪ ಧನಿಯ ನಗುವ ಬೀರುತಿಹಳು
ಗೆಜ್ಜೆ ಕಾಲ್ಗಗಳ ಸದ್ದಲೇ ಅವಳು
ಹಿಂದೆಜ್ಜೆ ತಾಳ ಹಾಕುತಲವಳು
ಮಿಂಚಂತೆ ಹೊಳೆದು ಮಾಯವಾದಳು.
- ಡಿ.ಸಿ.ಎನ್@100%
22 Dec 2017, 05:12 pm
Download App from Playstore: