ಯಂತಾ ಕಾಲ ಬಂತು

ಯಂತಾ ಕಾಲ‌ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು...


ಪಂಚೆ ಪೈಜಾಮುಗಳ ಮುಂದೆ ಪ್ಯಾಂಟ್ ಟೀ ಶರ್ಟ ಗಳು ಬಂತು...
ಲಂಗ ದಾವಣಿಗಳ ಮುಂದೆ ಜೂಡಿದಾರ
ನೈಟಿಗಳು ಬಂತು
ಅಂಚೆ ತಂತಿಗಳ ಮುಂದೆ ಜಂಗಮವಾಣಿಯ ಅಲೆಯು ಉಂಟಾಯಿತು...
ಯಂತಾ ಕಾಲ ಬಂತು ಸುನಾಮಿ ತರ ಆಧುನಿಕ ಕಾಲ ಬಂತು...||

ಅರಿಶಿನ ಕೇಸರಿಯಾ ಸ್ಥಾನದಲ್ಲಿ ಪೇರ್
ಅಂಡ್ ಲವ್ಲಿ ಬಂತು.
ಕುಂಕುಮ ವಿಭೂತಿಯಾ ಮುಂದೆ ಸ್ಟಿಕ್ಕರ್
ಚುಕ್ಕಿಗಳು ಬಂತು..
ಓಡಾಟ ಅಲೇದಾಟಗಳ ನಡುವೆ ವಿಷ ಉಗುಳುವ ಯಂತ್ರಗಳು ಬಂತು..
ಬಾನೆತ್ತರಕ್ಕೆ ಬೆಳೆದ ಮರಗಳಿಗೆ ಕುತ್ತು
ಉಂಟಾಯಿತು..||
ಯಂತಾ ಕಾಲ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು..

ಹಣದಾಸೆಗೆ ಮನುಷ್ಯರನ್ನು ಕೊಲ್ಲುವ ಜರ್ಜರಿತ
ಕಾಲ ಬಂತು..
ಮೊಸ ವಂಚನೆಗಳಿಗೆ ದಾರಿಯು
ಸುಲಭವಾಯಿತು...
ಪಾಪ ಪುಣ್ಯಗಳೆಂಬ ನೆಲೆಯು ಲೆಕ್ಕಕ್ಕೆ
ಸಿಗದಷ್ಟು ಬೇಳೆಯಿತು...
ಆಗಾದರೂ ನಾವ್ ತುಂಬ ಒಳ್ಳೆಯ ಜನ ಎಂದು ಹೇಳಿಕೊಂಡು ತಿರುಗುವ ಕಾಲ ಬಂತು.||
ಯಂತಾ ಕಾಲ ಬಂತು ಸುನಾಮಿಯ ತರ ಆಧುನಿಕ ಕಾಲ ಬಂತು...

ಮಂಗಳಕ್ಕೆ ರಾಕೆಟ್ ಕಳುಹಿಸುವಂತಾ
ಬುದ್ದಿವಂತರ ಕಾಲ ಬಂತು..
ಅಂಗಾದರೂ ಮೂಢನಂಬಿಕೆಗಳನ್ನು ಹೊಗಲಾಡಿಸದಾಯಿತು..
ಕಣ್ಣು ಕಿವಿ ಮೂಗೆಂಬ ಪಂಚೆಂದ್ರಿಯಗಳ ಮೇಲೆ
ಇಡಿತ ಕಡಿಮೆಯಾಯಿತು..‌
ಇದರಿಂದ ಅತ್ಯಾಚಾರ ಅನಾಚಾರಗಳ ಸಂಖ್ಯೆಯು ಹೆಚ್ಚಾಯಿತು....||

ಯಂತಾ ಕಾಲ ಬಂತು ಸುನಾಮಿಯ ತರ
ಆಧುನಿಕ ಕಾಲ ಬಂತು ..||


ಅಮರ್ತ್ಯ ಮಾರುತಿ ಯಾದವ್..

- ಅಮರ್ತ್ಯ ಮಾರುತಿ

22 Dec 2017, 07:33 pm
Download App from Playstore: