ಅಂಬರದ ಕಣ್ಣವಳು

ಅಂಬರದ ಕಣ್ಣವಳು ಕಾಡಿಗೆ
ಇಲ್ಲದೇನೆ ಮಿಂಚನ್ನು ಚೆಲ್ಲಿದವಳು,
ಬೆಳದಿಂಗಳ ಕರಿಮೋಡ ಸರಿಸಿ ಶಶಿಯಂತೆ ಕಂಡವಳು.

ಕಣ್ಣಲ್ಲೇ ನಕ್ಕು ಕ್ಷಣಬಿಡದೆ ಕಾಡುವವಳು,
ಕೆಂದಾವರೆ ತುಟಿಯವಳು,
ಉಸಿರ ಬಿಸಿಗೆ ಮುನಿದು ಮಲಗುವವಳು,
ಲಾಂಛನವಿಲ್ಲದ ಲಕುಮಿ ಅವಳು.

ಎದೆಯಲ್ಲಿನ ಪ್ರೀತಿಯ ಮೀಟಿ
ಕನಸುಗಳ ಕಪಾಟಿಯಲ್ಲಿ ಕಳೆಯಲಾಗದ ನೆನಪುಗಳನು ತುಂಬಿ ಮುಸಿ ಮುಸಿ ನಗುವವಳು,
ಕಣ್ಣ ಅಂಚಲ್ಲಿ ಕಿಂಚಿತ್ತು ಭಾವನೆಗಳ ಬಂಡಿ ಇಟ್ಟಿರುವಳು ಮಾತಲ್ಲಿ ಹೇಳದ ಮೌನವನ್ನು ಕುಡಿನೋಟದಲ್ಲೇ ತಿಳಿಸುವಳು.

ನನ್ನ ನಗುವಿನ ಹೊಳಪು ತುಂಬಿ ಬಿಗುತಿಹಳು ರೆಪ್ಪೆಯ ಅತ್ತಿತ್ತಾ ಆಡಿಸುತ್ತಾ ನನ್ನ ಉಸಿರಿನ ಸದ್ದು ಎಣಿಸುತ್ತಾ.........

- ಚುಕ್ಕಿ

22 Dec 2017, 09:56 pm
Download App from Playstore: