ಜಗಳ

ಕಾರಣವೇ ಬೇಕಿಲ್ಲ ಜಗಳಕ್ಕೆ ಈ ಜನಕ್ಕೆ
ಜರುಗಿದ್ದು ಒಂದಾದರೆ ಆಡುವುದು ಇನ್ನೊಂದು
ಮಾತು, ಹೇಳುವುದು ಬೇರೊಂದು ಕಥನ.

ಮಾತೊಂದೆ ಇವರ ಅಸ್ತ್ರ,
ನರವಿಲ್ಲದ ನಾಲಿಗೆಗೆ ಅಡ್ಡಿ ಏನು ಈ ಮನುಜರಿಗೆ,
ಪ್ರತಿಯೊಂದು ನಲಿವನ್ನು ನೂಕಿ ಹಾಕಿ ಪಾತಾಳಕ್ಕೆ
ಮಾತಲ್ಲಿ ಕೊಂಡು ತರುವರು ತಪ್ಪಿತಸ್ಥ ಭಾವನೆ
ಮನಕ್ಕೆ.

ಪಾಪ ಎಂಬುದು ಕೂಡಿಟ್ಟ ಬುತ್ತಿಯಂತೆ ಒಬ್ಬರ ಕಣ್ಣೀರು ನುಂಗಿ ಈ ಕ್ಷಣದ ನಗುವು ಪಡೆದರೆ
ನೋವು ಮರಳಿ ಬರುವುದು ನಿಮ್ಮೆಡೆಗೆ ಬಿಡದ
ಬೇತಾಳನಂತೆ ಬೆನ್ನೇರಿ.

ಎಲ್ಲರಲ್ಲೂ ಮೆಚ್ಚುಗೆ ಪಡೆಯುವ ಹುಚ್ಚು
ಏತಕೆ ಈ ಮನಸ್ಸಿಲ್ಲದ ಸ್ವಾರ್ಥಪರರಿಗೆ,
ನೋವು ಕೊಟ್ಟ ನಡೆತೆಯೇ ಸರಿಯೆಂದು
ಸಮರ್ಥಿಸಿಕೊಳ್ಳುವವರು ನೋಡಿದವರ
ಮುಂದೆಯೇ.

ಜಗಳ ಮಾಡದಿದ್ದರೆ ನೋವು ಕೊಡದಿದ್ದರೆ
ಊಟ ಸೇರದೇನೋ!
ಕಣ್ಣೀರ ಕಾಣದಿದ್ದರೆ ಕುಡಿದ ನೀರು ಗಂಟಲು
ಇಳಿಯದೇನೋ!
ಒಂದು ತಿಳಿಯದು ನನಗೆ ಇಂದು ಈ ಜೀವವಿಲ್ಲದ
ಜಗಳದಿಂದ ಜೀವಿ ಹಿಂಡುವುದೇಕೆಂದು?

- ಚುಕ್ಕಿ

22 Dec 2017, 11:35 pm
Download App from Playstore: