ಜೀತದಾಳು
ಸಿರಿವಂತರ ಹೆಗಲ ಮೇಲೆ ಏರಿ ಕುಂತ ಸಿರಿತನ,
ಬಡವರನು ಅವರ ಕಾಲ ಕೆಳಗೆ ದೂಳಿನಂತೆ ಮಾಡಿತಲ್ಲಾ?
ದಿನಗೂಲಿ ಮಾಡುವಂತ ಬಡಜನರಿಗೆ ದುಡ್ಡಿನ ಬಲೆ ಎಸೆದು ಜೀತದಾಳುಗಳಾಗಿ ಮಾಡುವರಲ್ಲ ಮರಣದ ವರೆಗೂ.
ಕೊರಳಿಗೊಂದು ಸರಪಳಿ ಇಲ್ಲ ಆದರೂ ನೋಡುವರು ಯಜಮಾನರು ಕುನ್ನಿಗಳಂತೆ ನಮ್ಮನ್ನೆಲ್ಲಾ,
ಯಾವ ಸಂವಿಧಾನದಲ್ಲಿ ರಚಿತವಾಗಿದೆ ಈ ನೀತಿ ದುಡ್ಡಿರುವವರು ಮಾತ್ರ ದೊಡ್ಡವರೆಂದು ಮಿಕ್ಕಿದವರು ಅವರ ಕೆಲಸದವರೆಂದು?
ಹೊಟ್ಟೆ ಪಾಡಿಗಾಗಿ ಬೆಟ್ಟವನ್ನಾದರು ಕೊರೆದು ಉರುಳಿಸುವ ಕೆಲಸ ಕೈಗೆತ್ತಿಕೊಳ್ಳುವರು ಬಡವರು,
ಒಪ್ಪೋತ್ತು ಊಟವಿಡದೆ ದುಡಿಸಿಕೊಳ್ಳುವರು ದಯನೀಯ ದುರುಳರು.
ಜೀತ ನೀಡುವುದರ ಬದಲಾಗಿ
ಕೊಟ್ಟ ಸಾಲಕ್ಕೆ ಬಡ್ಡಿಯೆಂದು ಹಿಡಿಯಷ್ಟು ಧಾನ್ಯಗಳನು ಕೈಯಲಿಟ್ಟು, ಕೈ ತೊಳೆದು ಕೊಳ್ಳುವರು ಕೊಟ್ಟೆವೆಂದು ಸಂಬಳವನ್ನು.
- ಚುಕ್ಕಿ
23 Dec 2017, 12:29 pm
Download App from Playstore: