ಕನ್ನಡಿ
ನೀ ನಕ್ಕಾಗ ನಗುವೆನು
ನೀ ಅತ್ತಾಗ ಅಳುವೆನು
ತೋರುವೆ ನೀನ್ನದೆ ಆಕೃತಿಯನು
ಕನ್ನಡಿ ಒಳಗೆ ಚಿತ್ರವನು
ನೀ ಹೇಗೆ ಇರುವೆಯೋ
ನಾ ಹಾಗೆ ಇರುವೆನು
ಮನದಲಿ ನೂರು ಭಾವನೆಯು
ನೋಡಲು ನಿನ್ನ ರೂಪವನು
ನೀನೇ ನಾನು,ನಾನೇ ನೀನು
ನೀ ಕೋಟ್ಟಿದ್ದನ್ನೆ ಕೊಡುವೆನು ನಾನು
ಎಂದು ಹೇಳುವ ಕನ್ನಡಿ ತಾನು
ಜೀವನ ಸತ್ಯವ ತಿಳಿಸುವೆನು
ನಿನ್ನ ಭಾವದ ಮುನ್ನುಡಿಗೆ
ಕನ್ನಡಿಯಾಗಿ ನಿಂತಿಹೆನು
ವಂಚನೆಮಾಡಿ ನಟಿಸುವಕಲೆಯ
ಬಿಟ್ಟಬಿಡು ನೀನು
ಹಮ್ಮು ಬಿಮ್ಮಿನ ಬಿಗುಮಾನವನು
ಎಂದೂ ತೋರದಿರು ನೀನು
ಕಾಣುವೇ ನಿನ್ನ ಪ್ರತಿಬಿಂಬವನು
ನನ್ನ ಮಾತನ್ನು ಕೇಳು,
ನಿನ್ನ ಮನದಂತೆ ತಾನು
ನಿನ್ನ ಕೈಗನ್ನಡಿ ನಾನು
- Bhagya Girish
23 Dec 2017, 07:14 pm
Download App from Playstore: