ನಿನ ನೋಡುವ ಆಸೆ
ಕಣ್ಣಲ್ಲಿ ನಿನ್ನ ರೂಪವೇ,
ಎದೆಯಲ್ಲಿ ಧ್ಯಾನವೇ ,
ನನ್ನಾಸೆ ನಿನ್ನ ಸ್ನೇಹವೆ,
ನನ್ನುಸಿರು ನಿನಗಾಗಿಯೇ.
ಆ ಊಹೆಯ ತಿಳಿಸಲು ನಿನಗೆ
ನನ್ನ ಭಾಷೆ ಈ ಮೌನವೇ,
ಮನದಲ್ಲಿ ಬಚ್ಚಿಟ್ಟ ರಹಸ್ಯಗಳನು
ಹುಡುಕಾಡುವ ನಿನ ನೋಟ ತಡಿಯುದೆಗೆ?
ನಿನ ನೀಲಿ ಕಣ್ಣಲ್ಲಿ ಬಿದ್ದು ಒದ್ದಾಡುತಿರುವ ನನ್ನ ಮನಸು ತೇಲುವುದೇಗೆ ?
ಕಚಗುಳಿ ಹಿಡುತಿರುವ ನಿನ ತುಂಟ ಚೇಷ್ಟೆಗಳ ಜೊತೆಗೆ ಏನೆಂದು ನಾ ಬೀಳಲಿ?
ಅದರುತಿರುವ ತುಟಿಗಳನ್ನು ನಾನಿಂದು ಬೇಡುತಿರುವೆ ಎದೆಯಲ್ಲಿನ ಮಾತೆನೆಂದು!
ತಲೆ ಬಾಗಿ ನಾನಿಂದು ನಿನಗಾಗಿ
ಕಾದಿರುವೇ ನಿನ ಶೌರ್ಯ ನೋಡಲೆಂದು.
ನೋಡುತ್ತಲೇ ವೇಳೆಯೆಲ್ಲಾ ಬೆಳಕಾಗಿ ಕರಗುತಿದೆ ಹೇಗೆಂದು ನಾ ತಡಿಯಲಿ ನಿನ್ನ ನೋಡುವ ಆಸೆಯನು!
- ಚುಕ್ಕಿ
24 Dec 2017, 03:28 pm
Download App from Playstore: