ಕಿವಿಯೋಲೆ
ಕಿವಿ ತಮಟೆಯ ಹಿಡಿದು
ದಿನವೆಲ್ಲ ಓಲಾಡಿ
ಏನೆಲ್ಲ ಹೇಳುತಿದೆ ಹುಡುಗಿ
ನಿನ್ನ ಕಿವಿಯೋಲೆ ?
ಸವಿ ಮಾತುಗಳ ನುಡಿದು
ಸೊಗಸಾಗಿ ತೇಲಾಡಿ
ದಿನವೆಲ್ಲ ಕಾಡಿಹುದೇ ಬೆಡಗಿ
ನನ್ನ ಕವಿಯೋಲೆ !
ನರ ಜನ್ಮ ಬೇಡೆನಗೆ
ಹೊಸ ಬದುಕು ನೀಡೆನಗೆ,
ಕಳೆದು ಬಿಡುವೆ ಕೊನೆಯ ವರೆಗೂ
ನಿನ್ನ ಸುಂದರ ಕಿವಿಯ ಹಿಡಿದು
ಜೋಕಾಲಿ ಆಡುತಲಿ
ಕಿರು ಕಿವಿಯೋಲೆಯಾಗಿ.
ಎಷ್ಟು ಚೆಂದವೋ
ನಿನ್ನ ನುಣುಪು ಕೆನ್ನೆಯ ಅಂದವ
ಹತ್ತಿರವಿದ್ದು ನೋಡಿ ಸವಿಯುವ ಬಗೆ
ಏನು ಅದೃಷ್ಟವೋ
ನಿನ್ನ ಸೊಂಪು ಕೂದಲುಗಳ
ಮಾರುತದಡಿಯಲ್ಲಿ ಮಿಂದೇಳುವ ಮಿಗೆ!
- ಶ್ರೀಗೋ.
25 Dec 2017, 08:38 pm
Download App from Playstore: