!!...ಗೆಳತಿ...!!

ಆಟವಾಡಿರುವುದುಂಟು, ಜೊತೆಗೆ ಊಟಮಾಡಿರುವುದುಂಟು
ಊಟವನ್ನು ಹಂಚಿ,ಕಿತ್ತು ತಿಂದಿರುವುದುಂಟು.
ಒಂದೇ ಡಬ್ಬಿಯಲ್ಲಿ ತಿಂದಿರುವುದುಂಟು
ಒಂದು ಮಿಠಾಯಿಗಾಗಿ ಜಗಳವಾಡಿರುವುದುಂಟು.

ಬಿದ್ದಾಗ ನಕ್ಕಿರುವುದುಂಟು
ನಕ್ಕಿ ಮುಗಿದ ಮೇಲೆ ಎತ್ತಿರುವುದುಂಟು.
ನಾಲ್ಕು ನಾಲ್ಕು ಸೇರಿದರೆ ಆಗುವುದು ಎಂಟು
ಎಂದು ಪರೀಕ್ಷೆಯಲ್ಲಿ ಹೇಳಿಕೊಟ್ಟಿರುವುದುಂಟು.

ಹುಟ್ಟು ಹಬ್ಬದ ದಿನ ಮುಖಕ್ಕೆ ಕೇಕ್ ಬಳಿದಿರುವುದುಂಟು
ಅದೇ ತುಂಡನ್ನು ಬಾಯಿಗಿಟ್ಟಿರುವುದುಂಟು.
ಜುಟ್ಟು ಕಿತ್ತು , ಮೇಲೆ ಜಿಗಿದು ಜಗಳವಾಡಿರುವುದು ಸಹಜ
ಅದೇ ಜುಟ್ಟು ಮತ್ತೆ ಹಾಕಿ ಇಟ್ಟಿರುವೆನು ಒಂದು ಹೂ ರೋಜ.

ತರಗತಿಯ ಆ ಕೊನೆಯ ಬೆಂಚಿನಲ್ಲಿರುವ ಮಜಾ
ಸಿಗದು ಟಾಕೀಸಿನಲ್ಲಿ ಮೂರು ಗಂಟೆ ಕೂತರೂ ನಿಜಾ.
ನನಗಿರುವುದು ನಿನ್ನ ಮೇಲೆ ಒಂದು ಚೂರು ಹುಚ್ಚು
ಎಂದೆಂದಿಗೂ ಗೆಳತಿ ನೀನು ನನ್ನ ಅಚ್ಚುಮೆಚ್ಚು...

- Priyanka H.S

25 Dec 2017, 09:23 pm
Download App from Playstore: