ಮುನಿದಿಹನೇನೋ

ಅತ್ತಿಂದೆತ್ತ ಸಾಗುತಿಹರು
ಸಾಲು ಸಾಲಾಗಿ, ಸವಾರಿ
ಹೊರಟಂತಿದೆ ಶಿಕಾರಿಗೆ
ಮುನಿದಿಹನೇನೋ
ಮಿತ್ರನಿಲ್ಲದ ನೆಲೆಗೆ ದಾವಿಸಲು

ಬಾಯ್ಬಿರಿದು ನಿಂತ
ಇಳೆಯಲಿ
ಭಗ ಭಗನೆ ಸುಡುತಿಹ
ಧರೆಯಲಿ
ಕಾದು ಕಾದು ಅಂಧರಾದವರ
ಹೊಲಗಳಲಿ
ಪಶು ಎಲುಬುಗಳೇ ತುಂಬಿದ
ಮೈದಾನದಲಿ
ಒಣಕೊಂಬೆಗಳ ಹೊತ್ತು ನಿಂತ
ಶೃಂಗಗಳಲಿ
ಹಬ್ಬದ ಒಣ ತಳಿರು ತೋರಣ ಕಂಡ
ಮನೆ ಮನೆಯ ಮನದಂಗಳದಲಿ
ನಿಂದು.....
ಘಳಿರು ಘಳಿರುಮನೆ ಕಂಬನಿ
ಸುರಿಸಿ ನಡೆಯ ಬಾರದೇ...‌‌.‌.‌... ಡಿ.ಸಿ

- ಡಿ.ಸಿ.ಎನ್@100%

25 Dec 2017, 09:24 pm
Download App from Playstore: