ಪ್ರೀತಿ....
ಪ್ರೀತಿ ಎಂಬುದು ಎರಡು ಪದ
ಅದು ಇಬ್ಬರ ನಡುವಿನ ಸಂಬಂಧ
ಪ್ರೀತಿ ಕುರುಡು ಎನ್ನುವರು ಪ್ರೇಮಿಗಳು
ನೋಡಲು ಸಾಲದು ಎರಡು ಕಣ್ಣುಗಳು
ಪ್ರೀತಿಗಾಗಿ ಕೊಡುವವರು ಹೂವಾ
ಕೇಳುವದಿಲ್ಲ ಅದರ ನೋವಾ
ಒಪ್ಪಿದರೆ ಹೂ ಅವರ ಕೈಯಲ್ಲಿ
ಇಲ್ಲದಿದ್ದರೆ ಪಾದದ ಅಡಿಯಲ್ಲಿ
ಪ್ರೇಮವೆಂಬುದೆ ಒಂದು ವರದಾನ
ಅದಕ್ಕಾಗಿ ಬಿಡುವವರು ಪ್ರಾಣ
ಪ್ರೀತಿವೆಂಬುದು ದೊಡ್ಡ ಸಾಗರ
ಅನುಭವಿಸಿದವರಿಗೆ ಗೊತ್ತು ಅದರ ತೀರ
ಪ್ರೀತಿಯೆಂಬುದು ಜನುಮದ ಬಂಧನ
ಅದಕ್ಕೆ ಪ್ರೇಮಿಗಳೆ ಯಜಮಾನ
ಪ್ರೀತಿಗಾಗಿ ಕಟ್ಟುವರು ತಾಜ್ ಮಹಲು
ತೋರಿಸುತ್ತಾರೆ ತಮ್ಮ ಪ್ರೀತಿಯ ಅಮಲು
- manu
26 Dec 2017, 08:42 pm
Download App from Playstore: