ಅವನು....

ಮದುವೆಗೂ ಮುನ್ನ ನೀನೆ ಇಂದಿರ ನೀನೆ ಚಂದಿರ
ಜಗವೇ ಬೇಡ ನೀನಿದ್ದರೆ ಸಾಕು‌ ನನ್ನ ಹತ್ತಿರ
ಈಗ ಪಕ್ಕದ ಮನೆ ಕೋತಿ ಮೂತಿಯೇ ಸುಂದರ
ಅವಳ ನೋಡಲು ಕ್ಷಣ ಕ್ಷಣ ಎಲ್ಲಿಲ್ಲದ ಕಾತರ
ನಾನು ಹೋದರೆ ಆಗ ಅವರ ಹುಡುಕಿ ಹತ್ತಿರ
ಕಂಡೊಡನೆ ಹೌಹಾರಿ ತತ್ತರಿಸಿ‌ ಮಾಡಿಕೊಳ್ಳುವರು ಬೇಸರ
ಇದಕ್ಕೆಲ್ಲ ಇರುವುದೆ ಯಾರ ಬಳಿಯಾದರು ಮೂಗುದಾರ


-------------------------------------------------------------------------

ಎದ್ದೇಳು ಬೇಕೆನುವಷ್ಟರಲಿ ಅವನು ಹತ್ತಿರ ಬಂದ
ಇನ್ನ ಸ್ವಲ್ಪ ಹೊತ್ತು ಮಲಗು ನಾ ಟೀ ತರುವೆ ಎಂದ
ಯಾರಿಗೂ ಸಿಗನು‌ ಇಂತ ಗಂಡ ಆಹಾ ಎಂಥಾ ಚೆಂದ
ಎಂದು ಅವನ‌ ನೆನೆದು ಪಡುತ್ತಿರುವಾಗಲೆ ಆನಂದ
ಎದ್ದೇಳೆ ಬೇಗ ಎಷ್ಟೊತ್ತ್ಮಲಗೋದು ನನಗೆ ಟೀ ಬೇಕೆಂದ
ಆಗಲೆ ನೆನಪಾದದ್ದು ಗಂಡ ಕನಸಲಷ್ಟೆ ಚೆಂದ
ಕನಸಲೇ ಅವನ ಕಂಡು ಪಡಬೇಕು ಆನಂದ
ನಿಜವಾಗಿ ಅವನಿಗಿಂತ ಒಂದು ಪ್ರಾಣೀನೆ ಚೆಂದ
ಕಾಣದಿದ್ದಾಗಲಷ್ಟೆ ಅವನು ನನಗೆ ಬೆಳಗಾವಿ ಕುಂದ

- ಶ್ರೀಕಾವ್ಯ

27 Dec 2017, 12:39 am
Download App from Playstore: