ಅವ್ವನ ಗುಣಗಾನ

"ಹೆತ್ತು ಹೋತು, ಬೆಳಸಿದೆ
ಬಾಳೆಯ ಗಿಡದಂತೆ,
ಲಾಲನೆ ಪಾಲನೆ ಮಾಡಿ ಸಾಕಿದೆ
ಬಾಳೆಯ ಎಲೆಯಂತೆ,
ಎದೆಯಾಲುಣಿಸಿ ಅಸಿವು ನಿಗಿಸಿದೆ
ಮಳೆಯ ಹನಿಯಂತೆ,
ಸೆರಗು ತೊಟ್ಟಿಲು ಕಟ್ಟಿ ಮಲಗಿಸಿದೆ
ಆಗಸದ ಚಂದ್ರನಂತೆ,
ಜೋ... ಜೋ.. ಜೋಗುಳ ಹಾಡಿದೆ
ದುಂಬಿಯ ಜೇನ್ಕಾರದಂತೆ.
ಜೀವ ತೈದು ಜೋಪಾನ ಮಾಡಿದೆ
ಹಿಮಾದ ಮುತ್ತಿನಂತೆ,
ಶೃಂಗಾರ,ಬಂಗಾರ ಮಾಡಿದೆ
ಬಂಗಾರದ ಗೊಂಬೆಯಂತೆ.

"ಎಲ್ಲಿ ಹೋದರಲ್ಲಿ ಸೇರಗಿಡಿದು ಸುತ್ತಿದೆ
ಅವ್ವ...ಅವ್ವ...ಎಂದು ಮರಿದುಂಬಿಯಂತೆ
ಸರಿಸಾಟಿ ಇಲ್ಲ ಈ ಜಗದೊಳ್ ನಿನಗೆ
ಎಷ್ಟೇ ಗುಣಗಾನ ಮಾಡಿದರು ಸಲಾದು
ಈ ಜನ್ಮದೊಳ್ ನನ್ನವ್ವ..........................

............ರಾಜು

- ರಾಜು ಹಾಸನ

27 Dec 2017, 10:12 am
Download App from Playstore: