ನೆಲೆ ಇಲ್ಲದ ಜೀವ......

ನಿನಗೆಲ್ಲಿಯ ನೆಲೆ
ನಿನಗೆಲ್ಲಿಯ ಬೆಲೆ
ನಿನಗೆಲ್ಲಿಯ ಬಂದ
ನಿನಗೆಲ್ಲಿಯ ದಾರಿ
ನಿನಗೆಲ್ಲಿಯ ಒಡಲು
ನಿನಗೆಲ್ಲಿಯ ಬದುಕು
ನೀ ಹುಟ್ಟಿದ ಮನೆಯಲ್ಲೆ
ನಿನಗೆ ನೆಲೆ ಇಲ್ಲ ಎಂದಮೇಲೆ
ಕಣ್ಣಿದ್ದರು ಅಂದಕಾರವೆ
ತುಂಬಿರುವ ಈ ಲೋಕದಲ್ಲಿ
ಎಲ್ಲಿದೆ ನಿನಗೆ ನೆಲೆ
ತಾನುಟ್ಟಿದಾ ಮನೆಗೆ
ಹೋರೆಯಾದವಳು
ಮೆಟ್ಟಿದ ಮನೆಗೆ ಬೇಡವಾದವಳು
ಎಲ್ಲಿಯು ಸ್ಥಿರವಾಗಿ ಇಲ್ಲದವಳು
ಹೂವಾಗಿ ಅರಳುವ ಮುನ್ನ
ಬಾಡುತ ಬಾಡುತ ಬದುಕ
ಸವೆಸುವವಳು ಎಂದಿಗು
ತನಗಾಗಿ ಬದುಕದವಳು
ತನ್ನವರ ಎಳಿಗೆಗಾಗಿ ಶ್ರಮಿಸುವವಳು
ಜೀವವೆ ಬೆರೆಯವರಿಗೆ ಮುಡುಪಾಗಿಸುವವಳು
ಕೊನೆಯವರೆಗು ಎಲ್ಲಿಯು ನೆಲೆಕಾಣದವಳು
ಮಣ್ಣಲ್ಲಿ ಮಣ್ಣಾಗಿ ಭೂತಾಯಿಯ
ಒಡಲ ಸೆರುವವಳು.....

- ರಾಗಸಿರಿ....

27 Dec 2017, 09:40 pm
Download App from Playstore: