ಜನ ಜಾತ್ರೆ
"ಹೊರಟಿತು ಹೊರಟಿತು
ಜನ ಜಾಗಮಗಿಸೋ ಜನ ಪರುಸೆ,
ಜನ ಸಾಗರದಂತೆ,
ನಮ್ಮೂರ ಜಾತ್ರೆಗೆ.
"ಹಿಂಡು ಹಿಂಡಾಗಿ
ಹೊರಟಿದೆ ತುಂಡೈಕ್ಕಳ ಹಿಂಡು,
ಹೆಣ್ಮಕ್ಕಳ ಗುಂಪು,
ನಮ್ಮೂರ ಜನ ಜಾತ್ರೆಗೆ.
"ದಂಡು ದಂಡಾಗಿ
ಹೊರಟಿದೆ ಹಿರಿಯರ ದಂಡು,
ಮುತೈದೆಯರ ಗುಂಪು,
ನಮ್ಮೂರ ಜಾತ್ರೆಗೆ.
"ಸಾಲು ಸಾಲಾಗಿ
ಮೆರವಣಿಗೆ ಹೊರೆಟರು
ಹೆಣ್ಮಕ್ಕಳು, ಹಣ್ಣುಕಾಯಿ ಹೊತ್ತು,
ನಮ್ಮೂರ ಜನ ಜಾತ್ರೆಗೆ.
"ಇಲ್ಲಿ ಅಲ್ಲಿ
ಎಲ್ಲಿ ನೋಡಿದರಲ್ಲಿ,ಬಣ್ಣ ಬಣ್ಣದ
ಹಸಿರು ತಳಿರುತೋರಣಗಳ ಸಿಂಗಾರ,
ನಮ್ಮೂರ ಜನ ಜಾತ್ರೆಗೆ.
"ಹೈ...ವೈ ಎಂದು
ಡೋಲು ತಮ್ಮಟೆ ಸದ್ದಿಗೆ,ಕುಣಿದು ಕುಪ್ಪಳಿಸಿ,
ಸಾಗಿದೆ ಪಡ್ಡೆ ಹೈಕ್ಕಳ ಪಡ್ಡೆ ಗುಂಪು
ನಮ್ಮೂರ ಜನ ಜಾತ್ರೆಗೆ.
"ಮೊಳಗಿತು ಮೊಳಗಿತು
ದೇವರ ನಾಮ,ನಾದ ಸ್ವರವಾಗಿ
ಮೇರಗುತಂದಿತು ಮುಗಿಲೆತ್ತರಕ್ಕೆ ,
ನಮ್ಮೂರ ಜನ ಜಾತ್ರೆಗೆ.
.............ರಾಜು
- ರಾಜು ಹಾಸನ
28 Dec 2017, 01:06 am
Download App from Playstore: