ದೇಶಭಕ್ತ

ವೀರ ಪುತ್ರನು ನೀನು
ಭಾರತ ಮಾತೆಯ ಕುಡಿ ನೀನು
ವೀರ ವನಿತೆಯ ಮಗು ನೀನು
ದೇಶಕೆ ಕಿತಿ೯ ತರುವೆಯಾ ನೀನು

ದೇಶ ಪ್ರೇಮದ ಭಕ್ತಿಯು
ನಿನ್ನಲಿ ಹರಿಯುವ ರಕ್ತವು
ಹಾಡುವುದು ನಿನ್ನೆದೆ ಗುಂಡಿಗೆಯು
ಎಂದು ನನ್ನ ದೇಶವೇ ಶ್ರೇಷ್ಠವು

ನಿನಗೆ ಋಣಿಯು ತಾನೆಂದು
ನಮಿಸುವೆ ನಿನ್ನಯ ಪಾದಕ್ಕೆಂದು
ನಿನೇ ಎನಗೆ ನೀಜ ದೈವ
ತುಂಬು ದೇಶ ಭಕ್ತಿಯ ಒಲವ

ನಿನ್ನಯ ಮಗುವು ತಾನೆಂದು
ಹೇಳುವ ಹೆಮ್ಮೆಯು ಎಷ್ಟೋಂದು
ನಿನಗಿಂತ ಮಿಗಿಲು ಯಾರೆಂದು
ಕೇಳಲು ಹೆತ್ತ ತಾಯಿ ಹೇಳುವಳು
ದೇಶವೇ ಮಿಗಿಲೆಂದು..
ದೇಶಕ್ಕಾಗಿ ಹೆತ್ತ ಮಗು ತಾನೆಂದು..

- Bhagya Girish

28 Dec 2017, 09:05 am
Download App from Playstore: