ಈ ಬೇಟಿ ಆದ ನಂತರ
ಈ ಬೇಟಿ ಆದ ನಂತರ
ಇನ್ನಿಲ್ಲ ಯಾವ ಅಂತರ!!
ಈ ನಮ್ಮ ಪ್ರೀತಿ ಸೋಜಿಗ
ನೀ ನನ್ನ ಪ್ರಾಣ ಓ ಸಖ!!
ಯಾರು ಚೆಲ್ಲಿ ಹೋದರೂ
ಬಣ್ಣವನ್ನು ಈ ಬದುಕಿಗೆ!!
ಯಾವ ಬೇಲಿ ಇರದೂ
ಇನಿಯ ನಮ್ಮ ನಲಿವಿಗೆ!!
ಮನಸಿನಲ್ಲಿ ನಿನ್ನ ಇರಿಸಿದೆ
ಬೆಚ್ಚನೆಯ ಪ್ರೀತಿ ಹೊದಿಸಿದೆ!!
ಕತ್ತಲಲ್ಲಿ ಬೆಳಕಿನಂತೆಯೇ
ನಾನು ನಿನ್ನ ಜೊತೆಗೆ ಸಾಗುವೆ!!
ನಮ್ಮ ಪ್ರೀತಿ ಹೀಗೆ ಸಾಗಲು
ಒಂಟಿ ತನವು ಬಳಿಗೆ ಬಾರದು!!
ದೂರ ಎಂಬ ಮಾತು ದೂರಕೆ
ಸನಿಹ ಒಂದೇ ನಮ್ಮ ಸನಿಹಕೆ!
- ಪಿ.ಜಿ.ಜ್ಯೋತಿ
28 Dec 2017, 10:51 am
Download App from Playstore: