ಸುಳ್ಳೆ ಸುಳ್ಳು

"ಯಾರ ನಂಬಲಿ
ಅಸ್ಟುಇಷ್ಟ, ಇಷ್ಟು ಇಷ್ಟ ಎನ್ನುವರು,
ಸುಳ್ಳು ಸಂತೆಯಲ್ಲಿ.

"ಯಾರ ನಂಬಿದರಷ್ಟೇ
ಹಾಗೆ ಹೀಗೆ ಎಂದು ಕಾಗೆ ಹಾರಿಸುವರು,
ಸುಳ್ಳು ಸಂತೆಯಲ್ಲಿ.

"ಎಷ್ಟೇ ಪ್ರೀತಿಸಿದರಷ್ಟೇ
ಚಿತ್ರ ಬಿಡಿಸುವರು ಚಿತ್ತಾರದ ಮಾತುಗಳ,
ಸುಳ್ಳು ಸಂತೆಯಲ್ಲಿ.

"ಪರಿ ಪರಿಯಾಗಿ, ನಂಬಿಸಿ
ಕಟ್ಟುವರು ಸುಳ್ಳಿನ ಕಂತೆಯ,
ಸುಳ್ಳುಗಳ ಸಂತೆಯಲ್ಲಿ.

"ತಿಳಿಯೋ ಪೆದ್ದಣ್ಣ
ಮನುಜರ ಮರ್ಮವ,
ಸುಳ್ಳುಗಳ ಸಂತೆಯಲ್ಲಿ.

..............ರಾಜು

- ರಾಜು ಹಾಸನ

28 Dec 2017, 11:23 am
Download App from Playstore: