ಜಣ ಜಣ ಕಾಂಚಾಣ

ಕುದಿರಿಯ ಮ್ಯಾಲೆ ಕತ್ತಿಯ
ಹಿಡಿದು ಸವಾರಿ ಕುಂತೈತೀ
ಹುಡುಕುಡುಕಿ ತಲೆಗಳ ತೆಗೆದು
ಜೇಂಕರಿಸುತ ನಲಿದೈತಿ

ಒದ್ದೊದ್ದು ಎದೆಯೆಲುಬುಗಳ
ಪುಡಿ ಮಾಡೈತಿ
ಮೊಣಕಾಲ್ ಕೈ ಕೀಲುಗಳ
ಮುರಿದು ಕುಣಿತೈತಿ

ಹೊಲ ಗದ್ದಿಗಳಾಗ ರಕ್ತದ
ಹೋಕುಳಿ ಹರಿದೈತಿ
ಅನ್ನದ ಪೈರ ಹಸಿರನು ನುಂಗಿ
ಬಡ ಬಾನಲಕೆ ಬೆಂಕಿ ಹಚೈತಿ

ಹಸಿರಿನ ನಾಡ ಚಿನ್ನದ ಬೀಡ
ಬೆತ್ತಲ ಮಾಡೈತಿ
ತುಳಿತುಳಿದು ಕಾಂಚಾಣ
ಜಣ ಜಣದ ಸದ್ದು ಹರಡೈತಿ

ಬಡವರ ನೆತ್ತರಲೇ ಮಿಂದೈತಿ
ಘರ ಬಡಿದಾಂಗ ಕುಂತೈತೀ
ಸಿಡಿಲೊಡೆದಾಂಗ ಬಿದೈತಿ
ಜಡವದು ಜಡವದು ಸತೈತಿ........ಡಿ.ಸಿ

- ಡಿ.ಸಿ.ಎನ್@100%

28 Dec 2017, 02:15 pm
Download App from Playstore: