ದಲ್ಲಾಳಿಗಳ ಬಗ್ಗೆ
ತೋರದಿರಿ ತೋರದಿರಿ ದಲ್ಲಾಳಿಗಳೆ ದರ್ಪ
ನ್ಯಾಯಕ್ಕೂ ಅನ್ಯಯಕ್ಕೂ ನೀವೇ ಕಾರಣವಪ್ಪ.
ರೈತರಿಂದ ಹಣತಿಂದು ಬಂದಿದೆ ಹೊಟ್ಟೆ ದಪ್ಪ
ನಿಮ್ಮ ಹೊಟ್ಟೆ ತುಂಬುವುದು ಅವರಿದಂತಾ ತೀಳಿತೆನಪ್ಪ....
ರೈತರ ಕಣ್ಣಿರಿನಲ್ಲಿ ಸ್ನಾನ ಮಾಡುವ ಆಸೆ ನೀಮಗೇಕಪ್ಪ
ಸ್ಯಾಪಲ್ ಹೇಸರಿನಲ್ಲಿ ತುಂಬುವುದು ನಿಮ್ಮ ಚೀಲ ದಪ್ಪ
ತೂಕಗಳಲ್ಲಿ ಮೋಸ ನಿಮಗೆ ಕಾಮನ್ ಅಪ್ಪ
ಅದನ್ನ ಬಿಟ್ಟು ಸ್ವಲ್ಪ ಮಾನವೀಯತೆ ಕಡೆ ನಿವ್ ನೊಡ್ರಪ್ಪ..
ದುಡ್ಡು ಗಳಿಸೋದೆ ಜೀವನವಲ್ಲ..
ಪಾಪ ಪುಣ್ಯಗಳಿವೇ ಮರಿಬಾರ್ದು ನಾವೇಲ್ಲ.
ಮೋಸ ವಂಚನೆ ತುಂಬಿವೇ ಜಗವೆಲ್ಲ.
ಅದರಲ್ಲಿ ಇದು ಒಂದ್ ಭಾಗ ಅನ್ಕೊಂಡ್ ಸುಮ್ನಿರಕಾಗಲ್ಲ....
ಕೇಳು ದೇಶಕ್ಕೆ ಅನ್ನ ನೀಡುವ ರೈತ
ನಿನ್ನ ಕಣ್ಣಿರಿಗೆ ಬೆಲೆ ಇಲ್ಲ ತೀಳಿತಾ..
ಭೂ ಮಾತೆ ನಿನ್ನ ಕೈ ಬೀಡುವುದಿಲ್ಲ.
ಯಾರನ್ನು ನಂಬಿಕೊಂಡು ನೀ ಕೆಲಸ ಮಾಡಲ್ಲ..
ವರುಷದಲ್ಲಿ ವರುಣನ ದರುಶನವಾದರೆ ಸಾಕು......
ಇದು ನಮ್ಮುರಿನ ರೈತರನ್ನು ಮತ್ತು ದಲ್ಲಾಳಿಗಳನ್ನ ನೋಡಿ ಬರ್ದಿದ್ದು..
ಅಮರ್ತ್ಯ ಮಾರುತಿ...
- ಅಮರ್ತ್ಯ ಮಾರುತಿ
29 Dec 2017, 11:55 am
Download App from Playstore: