ರೈತರು
ರೈತರು ರೈತರು ರೈತರು
ಭೂವಿಯನು ನಂಬಿ ಬದುಕುವರು
ಹಗಲಿರುಳೆನ್ನದೆ ದುಡಿಯುವರು
ಬೆವರನು ಬಸಿದು ಬೆಳೆಯುವರು
ಅನ್ನವ ನೀಡುವ ದೇವರು
ದೇಶದ ಬೆನ್ನೆಲಬು ಇವರು
ನೆಗಿಲ ಯೋಗಿಗಳೋ ಇವರು
ದಣಿವನೆ ಅರಿಯದ ಶ್ರಮಿಕರು
ರೈತರು ರೈತರು ರೈತರು
ಧರಣಿಯ ಉಳುವರು ಪ್ರೀತಿಯಲಿ
ಸಂತೋಷದಿ ನಲಿವರು ಮಳೆಯಲಿ
ಕೂಡಿ ದುಡಿವರು ಸ್ನೇಹದಲಿ
ಪ್ರೀತಿಯ ಮಕ್ಕಳು ಭೂ ತಾಯಿಯ
ಮಡಿಲಲಿ...
ಅನ್ನವ ನೀಡುವ ಅನ್ನ ದಾತರ
ನಮಿಸಿ ಮನದಲ್ಲಿ..
ಹೇಳಿ ಮಣ್ಣಿನ ಮಕ್ಕಳೇ ನಿಜ ದೇವರು
ಈ ಧರಣಿಯ ಒಡಲಲಿ
ರೈತರು ರೈತರು ರೈತರು
- Bhagya Girish
04 Jan 2018, 12:38 pm
Download App from Playstore: