ಅವಳ ಪ್ರೀತಿ

ಅವಳ ಪ್ರೀತಿ ಮಾತು
ಮನಸ ಕದ್ದು ಹೋಯ್ತು
ಹಣೆ ಮೇಲಿಟ್ಟ ಹೂ ಮುತ್ತು
ಕಲ್ಲಿಗೂ ಜೀವ ಹೊತ್ತು ತಂತು

ಸುರಿಸಿದೆ ಕನಸಿನ ವರ್ಷ
ಒಂದು ಮೆಲು ಪ್ರೀತಿ ಸ್ಪರ್ಶ
ಅವಳಿರಲು‌ ಸನಿಹ ಏನೊ ಹರ್ಷ
ಮರೆಯಾಗಲೆನ್ನೊಳಗೆ ಶುರು ಸಂಘರ್ಷ

ಅವಳಿಗೊರಗಿದರೆ ಸುಮ್ಮನೆ ಹಾಗೆ
ಕಣ್ಣೀರು ಕರಗಿಬಿಡುವುದು ತಿಳಿಯದು ಹೇಗೆ
ಅವಳಿರೆ ಕೈ ಹಿಡಿದು ಜೊತೆಜೊತೆಗೆ
ನಡೆದುಬಿಡುವೆ ಕರೆದರು ಜಗದಾಚೆಗೆ

ಬಿರಿದ ಭುವಿಗಿಳಿದ ಮಳೆಹನಿ‌ ಅವಳು‌
ಪ್ರೀತಿ ತುಂಬಿ ನಿಂತಿದೆ ನನ್ನೆದೆ ಒಡಲು
ಅವಳ ಸ್ವಚ್ಛ ಪ್ರೀತಿಯ ಅಮಲು
ಸಾವು ಬಂದರು ಬಿಡದು ನಾ ಹೋಗಲು

- ಶ್ರೀಕಾವ್ಯ

04 Jan 2018, 09:40 pm
Download App from Playstore: