ಕನವರಿಕೆ
ಕುಂಟು ನೆಪಕೆ
ಕೆಂಪೇರುವ ನಿನ್ನ ಕೆನ್ನೆಯಾಣೆ
ಕೆಂಪೇರಿದಷ್ಟು ಅರಳುವ
ಆ ಮುದ್ದು ಕಂಗಳ ಆಣೆ
ಪಿಸುಮಾತಿನ ನಿನ್ನ ಬೈಗುಳ
ಹಾಡಿದಂತೆ ಕಿವಿಯಲಿ ಜೋಗುಳ
ಜೊತೆಯಲ್ಲಿ ಬಾಳುವ ಕನಸು
ನೆನೆದರೇ ಪ್ರತಿ ಕ್ಷಣ ಸೊಗಸು
ಮುದ್ದು ಗೆಳತಿಯೇ
ಮನದ ಒಡತಿಯೇ
ನಿನ್ನ ಹುಸಿಮುನಿಸೇ
ನನಗೆ ಸಿಹಿತಿನಿಸು
- ಚಿದಾನಂದ
04 Jan 2018, 10:35 pm
Download App from Playstore: