ಕಳೆದು ಹೋದೆ ನಿನ್ನ ಕಂಡು

ನಿದಿರೆ ಬರದು ನನಗೆ ಇನ್ನೂ
ಕಾಡಿದೆ ನೀ ನನಗೆ ನನ್ನೊಳಗೆ ನೀನಾಗಿ

ಲೋಕವೆ ನಾಚುವ ಸೌಂದರ್ಯ ಗಣಿಯಾಗಿ
ತಣಿಸಿದೆ ನನ್ನ ಮನವ ಜೇನಿನ ಮಾತಲ್ಲಿ
ಕಣ್ಣತುಂಬುವಂತೆ ಮೋಡಿಯ ನೀ ಮಾಡಿ

ಆಕಾಶ ಚುಕ್ಕಿಗಳೆ ನಿನ್ನ ಮುಡಿಗೆ ಹೂವಾಗಿ
ಸೂರ್ಯ ಚಂದ್ರರೆ ಇನ್ನೂ ನಿನ್ನಯ ನಯನವಾಗಿ
ನನ್ನ ಉಸಿರಲ್ಲಿ ನೀನು ನೀನೆ ಉಸಿರಾಗಿ

ನಾಚಿದೆ ಕೆಂಗುಲಾಬಿ ನಿನ್ನ ನಗುವ ಕಂಡು
ನಿನ್ನಯ ವಯ್ಯಾರಕೆ ಸರಿಸಾಟಿ ಬೇರೆ ಏನು
ಮರೆತೋಯಿತು ನಾಟ್ಯವ ನವಿಲು ನಿನ್ನ ಕಂಡು

ಏಳು ಸಾಗರ ದಾಟೋ ಧೈರ್ಯವು ನನ್ನದಾಯಿತು
ಜಗವ ಗೆಲ್ಲುವ ಛಲವು ನನ್ನಲಿ ಮೂಡಿಯಾಯಿತು
ನೀ ಜೊತೆಗಿದ್ದರೆ ಬೇರೆ ಏನು ಬೇಡವಾಯಿತು...

- Irayya Mathad

06 Jan 2018, 12:45 pm
Download App from Playstore: