ಬಂಧನ

ಉದಿಸಿದೆ ನೀ ಉದರದಿಂದ
ಆಯಾಗಿ ಹಾರಾಡುವ ಹಕ್ಕಿಯಂತೆ
ಬೆನ್ನತ್ತಿ ಬರುವುದು ಸಮಾಜದಿಂದ
ಒಂದೊಂದಾಗಿ ಬಂಧನದ ಕಂತೆ ಕಂತೆ

ಮಾಂಸದ ಮುದ್ದೆಯಂತೆ
ನೀ ಬಂದೆ ನನ್ನ ಕಣ್ಣ ಮುಂದೆ
ಈ ಜಗದ ಜನಜಂಗುಳಿಯ
ನೀ ಕಂಡು ಭಯದಿ ಬೆದರಿದೆಯಂತೆ

ನೀನಿಂದು ಸ್ವಚ್ಛಂದ ಆಗಸದಂತೆ
ನೀನಿಂದು ಶ್ವೇತ ಫಲಕದಂತೆ
ನೀನಾಗು ಕಡಲೊಳಗಿನ ಮುತ್ತಂತೆ
ನೀನಾಗು ಕುಸುಮದೊಳಗಿನ ಗಂಧದಂತೆ

ಆಸರೆಯ ವರವಾಗಿ
ನೀ ಬರುವೆ ಎಂದಿದ್ದರು
ಮನೆ ಬೆಳಗೊ ವಧುವಾಗಿ
ನೀ ಬಂದು ಎಲ್ಲರ ಆಲಿಂಗಿಸಿದೆ

ಬೇಡವೆಂದರು ಬೆನ್ನಟ್ಟೀತೆ
ಗಂಡೆಂಬ ಆ ಗುಮ್ಮ
ಯಾರು ಬಲ್ಲರು ?
ನೀನಾಗಬಹುದು ಈ ಜಗದಮ್ಮ




ಶಾರಧ

- ಶಕುಂತಲಾ

06 Jan 2018, 06:52 pm
Download App from Playstore: