ಆ ನಾಳೆ.
ವರುಷ ವರುಷಗಳೇ ಕಳೆದುಹೋಯಿತು ,
ಒಳ್ಳೆಯ ದಿನಗಳ ಕಾಯುವಿಕೆಯಲ್ಲಿ
ಕನಸುಗಳಿಗೂ ಜೀವ ಬರುತ್ತದೆ ಎಂಬ ಆಸೆಯಲ್ಲಿ
ಬರೀ ನಿರೀಕ್ಷೆಯಲ್ಲಿ..
ನಿನ್ನೆಯ ದಿನಗಳಲ್ಲಿ ಖುಷಿಯಿರಲ್ಲಿಲ್ಲ
ಇಂದಿನ ದಿನಗಳಲ್ಲೂ ಖುಷಿಯಿಲ್ಲ
ಬರುವ ನಾಳೆಯಲ್ಲಾದರೂ
ಖುಷಿಯಿರಬಹುದೆಂಬ ಆಸೆ..
ಕಣ್ಣೀರನ್ನು ಕಾಣದಂತೆ ಅಡಗಿಸಿಟ್ಟು
ನಿತ್ಯ ನಗುವಿನ ಮುಖವಾಡ ಹೊತ್ತು
ಬರೀ ನಟನೆಯನ್ನೇ ಜೀವಾಳವಾಗಿಸಿದ
ಬದುಕು ಸಾಕಾಯ್ತು..
ನನಗೂ ಬೇಕಿದೆ, ಎಲ್ಲರಂತೆ ಸ್ವಚ್ಛಂದ ನಗು
ಖುಷಿಯಲ್ಲೂ ಬರುವ ಸುಂದರ ಅಳು
ಚಿಂತೆಯಿಲ್ಲದೆ ಬರುವ ಆರಾಮ ನಿದ್ದೆ
ನನಗೂ ಬೇಕಿದೆ..
ಕಂಡ ಕನಸಲ್ಲಿ ಕೆಲವಾದರೂ ನನಸಾಗಬೇಕು
ದುಃಖವಿದ್ದರೂ, ಖುಷಿಗೆ ಕೊರತೆಯಿರಬಾರದು
ನಾನು ಎಲ್ಲರಂತೆ ನಗಬೇಕು,
ಬದುಕನ್ನು ಪ್ರೀತಿಯಿಂದ ಪ್ರೀತಿಸಬೇಕು
ಆದರೆ, ವರುಷಗಳಿಂದ ಕಾದರೂ
ಇನ್ನೂ ಬರುತ್ತಿಲ್ಲ ಆ ದಿನ..
ರಾಮ ಶಬರಿಗೆ ಕಾದಂತೆ ಕಾದಿದ್ದೇ ಬಂತು
ಎಂದು ಬರುವುದೋ ಆ ನಾಳೆ..
ರಚನೆ :- ಮಂಜುನಾಥ.ಸಿ
ಕಾಡುಗುಡಿ..
ಕಾಡುಗುಡಿ ಜನಪದ ಸಾಂಸ್ಕ್ರುತಿಕ ವೇದಿಕೆ ..
- Manjunath C
07 Jan 2018, 11:16 am
Download App from Playstore: