ಬದಲಾವಣೆ ಬಯಸಿ

ಬದಲಾಗದು ಈ ಸಮಾಜದ ದೊರಣಿ
ಹೆಣ್ಣಿಗೆ ಎಂದಿಗೂ ಸಿಗದು ಸಮಾನತೆ
ಪ್ರತಿ ಕ್ಷಣವೂ ಪಂಜರದಲ್ಲಿ ಇಟ್ಟು ಸಾಯಿಸುವ ಬದಲಾಗಿ ಜನಸಿದ ಶಿಶುವನು ಸಾಯಿಸಿ
ಸಂತಸ ಪಡಬಹುದಲ್ಲವೇ ಈ ಜನರು!!

ಜಾನುವಾರುಗಳಿಗಿಂತ ಕಡೆ ಇವರು
ಅವರವರ ಇಷ್ಟದ ತಾಳಕ್ಕೆ ತಕ್ಕಂತೆ ಹೆಣ್ಣನ್ನು ಕುಣಿಸುವರು,ನೂರಾರು ಷರತ್ತುಗಳನ್ನು ಕಾಣಿಕರವಿಲ್ಲದೆ ವಿದಿಸುವರು!!

ಉಸಿರಾಡುವ ಬಗೆಯಲ್ಲೂ ಹೆಚ್ಚು ಕಡಿಮೆ ಹುಡುಕುವರು,ಗಂಡು ಹೆಂಡ ಕುಡಿದು ಬಂದರೂ ರುಂಡ ಮುಂಡ ಅಲುಗಾಡಿಸದೆ ಸುಮ್ಮನಿರುವ ಮಾತಿಲ್ಲದ ಮೂಕರಿವರು!!

ಹೆಣ್ಣು ಕುಂತ ಜಾಗದಿಂದ ಎದ್ದು ನಿಂತರು ಸಭ್ಯತೆ ಕಲಿತಿಲ್ಲ ಎಂದು ಅಸಭ್ಯ ಮಾತಾನಾಡುವರು,
ಪ್ರಪಂಚ ಇರುವುದು ಉಸಿರಾಡುವ ಪ್ರತಿಯೊಂದು ಜೀವಿಗೆಂದು ಮರೆತಿರುವರು, ಹೆಣ್ಣಿಗೆ ನಾಲ್ಕು ಗೋಡೆಯ ಮಧ್ಯೆ ಒಂದು ನೆರಳಿನ ಕಾವಲಿಟ್ಟು ಹೆಗಲ ಮೇಲೆ ಏರಿ ಕುಂತ ಧೂಳ ಹೊರೆಸಿ ನಡೆವರು!!

ಬದಲಾವಣೆ ಬಯಸಿ ನಾ ಬರೆದ ಈ ಒಂದು
ಕವನ ತಟ್ಟಿ ಎಬ್ಬಿಸ ಬಾರದೆ ಮಾನವೀಯತೆಯನು?
ಈ ಜನರಲ್ಲಿನ ಲಿಂಗ ತಾರತಮ್ಯ ಕಿಂಚಿತ್ತಾದರು ಸುಟ್ಟು ನನ್ನ ಕಣ್ಣೀರ ಬಿಸಿಗೆ
ಬೂದಿ ಆಗಬಾರದೆನು?

- ಚುಕ್ಕಿ

08 Jan 2018, 05:00 pm
Download App from Playstore: