ನಾನು ವೇಶ್ಯೆ....!!

ಇವತ್ತು ನಾನು ಸಾಕಷ್ಟು
ಸಿಂಗರಿಸಿಕೂಂಡಿದ್ದೇನೆ
ಸುಂದರವಾಗಿ ಕಾಣಲು
ಒಂದೆರಡು ಗಿರಾಕಿ ಹೆಚ್ಚಾಗಲು..!

ತುಟಿಗೆ ನಸುಗೆಂಪು
ಕಣ್ಣುಗಳಿಗೆ ತುಸು ಮಿಂಚು
ಹುಬ್ಬುಗಳಿಗೆ ಗಾಢ ಕಪ್ಪು ಕಾಡಿಗೆ
ಮುಡಿಗೆ ಮಲ್ಲಿಗೆ ಹೂವು..!

ಅವರಿಗೆ ಇವೆಲ್ಲ ಬೇಕಿಲ್ಲ
ಕತ್ತಲಲ್ಲಿ ಸಿಗುವ ಆ
ಹತ್ತು ನಿಮಿಷ ಸಾಕಾಗಲ್ಲ
ವ್ಯವಹಾರ ಕುದುರಿಸುವಾಗ
ಸುಂದರ ಮುಖ
ನಂತರ ಬೇಕಾದದ್ದು
ಕೇವಲ ದೇಹ ಸುಖ..!

ಮೃಗದಂತೆ ಎರಗಿದರೂ
ಕೊನೆಗೆ ಶಾಂತ ಸ್ವರೂಪಿ
ನನಗೆ ಚೆನ್ನಾಗಿ ಗೊತ್ತು
ಇವೆಲ್ಲ ಉಳಿಯವುದಿಲ್ಲ
ಆದರೂ ಸಿಂಗರಿಸಿಕೊಳ್ಳಬೇಕು
ಅವರ ತೀಟೆಗಾಗಿ ನನ್ನ ಹೊಟ್ಟೆಗಾಗಿ..!

ಹಣ ಕೊಡುವ ಅವರು
ದೇವರ ರೂಪವಂತೆ
ಆ ದೇವರಿಗೆ ದೇಹ
ಮಾರಿದರೆ ನಾ ಸೂಳೆಯಂತೆ..
ದೇವನು ಗಿರಾಕಿಯಾಗಿದ್ದು
ಇವರಿಗೆ ಕಾಣಲಿಲ್ಲ
ನನ್ನಂತವರುಇವರ
ನಡುವೆ ಬೇಕಾಗಿಲ್ಲ..!

ಕತ್ತಲ್ಲಲ್ಲಿ ಅವರು
ಅರಚಿದರೂ, ಪರಚಿದರೂ
ಕಚ್ಚಿದರೂ ಸುಮ್ಮನಿರಬೇಕು
ಹಗಲಲ್ಲಿ ಸೂಳೆ.. ಸೂಳೆಯೆಂದು
ಚುಚ್ಚಿದರೂ ಸುಮ್ಮನಿರಬೇಕು..!

ಮನೆಯಲ್ಲಿ ಶ್ರೀರಾಮನಂತೆ
ಇರುವ ಇವರು
ಮನದಲ್ಲಿ ಸೂಳೆಯ ಸಂಗದ
ಕನಸು ಕಾಣುವರು
ಪತಿವ್ರತೆಯ ಗುಣಗಾನ
ಬರೀ ಹೆಣ್ಣಿಗಲ್ಲವೋ ದಡ್ಡ
ಗಂಡಾದರೂ
ಲಕ್ಷ್ಮಣರೇಖೆಯನು ದಾಟಬಾರದು..!

ಹೊಟ್ಟೆಯನ್ನು ಹೊರೆಯಲು
ದೇಹ ಮಾರಿದವಳಿಗಿಂತ
ದೇಹದ ತೀಟೆಗೆ ಮನ
ಮಾರಿಕೊಳ್ಳುವವನೇ ಮಹಾಪಾಪಿ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

10 Jan 2018, 07:43 pm
Download App from Playstore: