ಆ ಸಂಜೆಯ ನೆನಪುಗಳು...

ಯಾಕೋ ನಿನ್ನ ನೋಡುವ ಹಸಿವು
ಇನ್ನೂ ಹಿಂಗಲಿಲ್ಲ ನೋಡುತ್ತ ನಿಂತುಬಿಡಲೇ
ಆದರೇನು ನಿಲ್ಲುವ ಹಾಗಿಲ್ಲವೇ
ನನ್ನ ವೇಳೆಯಿಂದು ಸಮೀಪಿಸುತ್ತಿದೆ
ಯಾರಲ್ಲಿ ಹೇಳಲಿಂದು
ನನ್ನೆದೆಯಲಿ ಬಚ್ಚಿಟ್ಟ ವೇದನೆಯನು
ಕಣ್ಣ ತುಂಬಾ ನಿನ್ನ ನೋಡಿ
ಮುತ್ತಿಕ್ಕು ಬಯಕೆಯಾಗಿದೆ
ಆದರೇನು ಕಣ್ಣೀರು ಜಾರಿ
ಸಂಭ್ರಮಿಸುತ್ತಿದೆ ಕೆನ್ನೆಯ ಸೇರಲು,
ಜಾರುವ ಕಣ್ಣೀರನು ತಡೆಯಲಾರದೆ
ಸೋತು ಸಾಗರದತ್ತ ಕಾಲೋಡುತ್ತಿದೆ
ಆದರೆ ಎಲ್ಲೂ ಕಾಣೆನೂ ನಾನು
ಆ ಬಂಡೆ, ಆ ಸಂಪಿಗೆ ಮರ, ಆ ದೋಣಿ
ನಿನ್ನ ಆ ಹುಸಿನಗುವಲ್ಲಿ ನಾ ಕಂಡ ಕನಸು
ಎಲ್ಲಾ ಕಳೆದೋಗಿದೆ ಇಂದು
ಈ ಸಮಯದಲ್ಲೀಗ ಜೊತೆಯಾಗಿರುವುದು ನೀನಲ್ಲ
ಆ ಸಂಜೆಯ ನಿನ್ನೊಂದಿಗೆ ಕಳೆದ ನೆನಪುಗಳು
ಎಂದಷ್ಟೇ ಹೇಳುವೆನು!

- ಪ್ರಿಯಾಂಕ

10 Jan 2018, 10:31 pm
Download App from Playstore: