ಅಮ್ಮಾ....
ಓ ಮಮಕಾರದ ಅಕ್ಷಯ ನಿಧಿಯೇ
ನಿನಗೆ ಕೋಟಿ ವಂದನೆ..!
ಓ ಸ್ನೇಹದ ಮೂರ್ತ ರೂಪವೇ
ನಿನಗೆ ಕೋಟಿ ವಂದನೆ..!
ನಡು ರಾತ್ರಿಯಲು ನನ್ನ ಅಳುವಿಗೆ
ಎದೆ ಹಾಲಿನ ಸಾಂತ್ವನ ನೀಡಿ..
ನನ್ನ ಹಟಕ್ಕೆಲ್ಲ ತಲೆಬಾಗಿ ನಿಂತು..
ಅತ್ತಾಗ ಕಣ್ಣೊರೆಸಿ ,ನಕ್ಕಾಗ ಕಣ್ಣರಳಿಸಿ..
ಪ್ರೀತಿಯ ಮಳೆ ಸುರಿಸಿ, ಗೆಲುವಿನ ದಾರಿ
ತೋರಿಸಿ
ಬೆಳೆಸಿದಳು ನನ್ನ ತಾಯಿ…
ಓ ಜನನೀ.. ನಿನಗೆ ಕೋಟಿ ವಂದನೆ…!
ತೆವಳಿ ಬರಲು ಕೈ ನೀಡಿಡಳು..
ತೊದಲು ನುಡಿಯಲು ತಿದ್ದಿ ಹೇಳಿದಳು..
ಚಂದ ಮಾಮನ ತೋರಿಸಿ ತುತ್ತು ಕೊಟ್ಟು
ಹಸಿವ ನೀಗಿಸಿದಳು..
ತನ್ನ ಬಸಿರೊಳಗೂ ನನಗೆ ಉಸಿರಾದಳು..
ಓ ದಿವ್ಯ ಚೇತನವೇ.. ನಿನಗೆ ಕೋಟಿ
ವಂದನೆ..!
ತನ್ನ ಬೇಸರವ ಮರೆತು ನನಗೆ
ಸಾಂತ್ವನವಾದಳು..
ನನ್ನ ಸಂತೋಷದಲಿ ನಗೆಯ ಕಂಡಳು..
ಗೆಲುವಿಗೆ ಸ್ಪೂರ್ತಿಯಾದಳು…
ಬದುಕಿದೆ ದಾರಿದೀಪವಾದಳು..
ಓ ಸ್ಪೂರ್ತಿಯ ಚಿಲುಮೆಯೇ.. ನಿನಗೆ
ಕೋಟಿ ವಂದನೆ..!
- Halesh S
12 Jan 2018, 07:10 pm
Download App from Playstore: